ಬೆಂಗಳೂರು : ನಮ್ಮ ಮೆಟ್ರೋ ಮಹಿಳೆಯರಿಗೆ ಎಷ್ಟು ಸೇಫ್? ಅನ್ನೋ ಪ್ರಶ್ನೆ ಎಲ್ಲರಲ್ಲೂ ಆಗಾಗ ಮೂಡುತ್ತದೆ. ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಕಾಮುಕರು ಕಿರುಕುಳ ಕೊಡುತ್ತಿರೋ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಅಂಥದ್ದೇ ಘಟನೆಯೊಂದು ನಮ್ಮ ಮೆಟ್ರೋದಲ್ಲಿ ನಡೆದಿದೆ.
ಹೌದು, ನಮ್ಮ ಮೆಟ್ರೋದಲ್ಲಿ ಮಹೇಶ್ ಎಂಬ ಕಾಮುಕ ಯುವತಿಯರ ಖಾಸಗಿ ಅಂಗಗಳ ಫೋಟೋ ತೆಗೆದು ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಹಲವು ಯುವತಿಯರ ಖಾಸಗಿ ಅಂಗಗಳ ಫೋಟೋ ಮತ್ತು ವಿಡಿಯೋ ಶೂಟ್ ಮಾಡಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ.
ಏನಿದು ಘಟನೆ? ಒಂದು ವಾರದ ಹಿಂದೆ ಡಿಸೆಂಬರ್ 25ನೇ ತಾರೀಕು ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿ ಮೆಜೆಸ್ಟಿಕ್ನಿಂದ ಜೆ.ಪಿ ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಮಹೇಶ್ ಎಂಬ ಕಾಮುಕ ಯುವತಿ ಫೋಟೋ, ವಿಡಿಯೋ ತೆಗೆದಿದ್ದಾನೆ. ವಿಷಯ ತಿಳಿದು ಸಿಟ್ಟಿಗೆದ್ದ ಯುವತಿ ಆತನ ಕಪಾಳಕ್ಕೆ ಬಾರಿಸಿದ್ದಾಳೆ. ಇದೇ ವೇಳೆ ಡ್ಯೂಟಿ ಮುಗಿಸಿ ಮನೆ ಕಡೆ ಹೊರಟಿದ್ದ ಮೆಟ್ರೋ ಸಿಬ್ಬಂದಿಗಳಾದ ಸುಜೀತ್, ಎಸ್.ಜಿ ರಾಮ್ ಬಹದ್ದೂರ್ ತಾಪ ಯುವತಿ ನೆರವಿಗೆ ಧಾವಿಸಿದ್ದಾರೆ.
ಸದ್ಯ ಕಾಮುಕ ಮಹೇಶ್ನನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸ್ರು ಆರೋಪಿ ಮೊಬೈಲ್ ಪರಿಶೀಲಿಸಿದಾಗ 50ಕ್ಕೂ ಹೆಚ್ಚು ಫೋಟೋಗಳು ಆತನ ಸಿಕ್ಕಿವೆ. ಆರೋಪಿಯನ್ನು ಬಂಧಿಸಿದ್ದಲ್ಲದೇ ನಮ್ಮ ಮೆಟ್ರೋ ರೂಲ್ಸ್ ಸೆಕ್ಷನ್-59ರ ಅಡಿಯಲ್ಲಿ 5 ಸಾವಿರ ದಂಡ ವಿಧಿಸಿದೆ. ಡ್ಯೂಟಿಯಲ್ಲಿಲ್ಲದಿದ್ರೂ ಯುವತಿಗೆ ಮೆಟ್ರೋ ಸಿಬ್ಬಂದಿಗಳು ಸಹಾಯ ಮಾಡಿದ್ದಕ್ಕೆ BMRCL ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಧನರಾಜ್ ಬಿಗ್ ಫ್ಯಾಮಿಲಿ.. ಮಗಳನ್ನು ನೋಡಿ ಎಮೋಷನಲ್ ಆದ ಧನು..!