Download Our App

Follow us

Home » ಮೆಟ್ರೋ » ಮಹಾಲಕ್ಷ್ಮಿಯನ್ನು 50 ಪೀಸ್​ ಮಾಡಿದ ರಾಕ್ಷಸನಿಗೆ ತೀವ್ರ ಹುಡುಕಾಟ – ಪೊಲೀಸರ ಪ್ಲಾನ್ ಏನೇನು?

ಮಹಾಲಕ್ಷ್ಮಿಯನ್ನು 50 ಪೀಸ್​ ಮಾಡಿದ ರಾಕ್ಷಸನಿಗೆ ತೀವ್ರ ಹುಡುಕಾಟ – ಪೊಲೀಸರ ಪ್ಲಾನ್ ಏನೇನು?

ಬೆಂಗಳೂರು : ರಾಜಧಾನಿ ದೆಹಲಿಯಲ್ಲಿ 2022ರ ಮೇ18 ರಂದು ಶ್ರದ್ದಾ ವಾಕರ್ ಎಂಬ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿ ಬಳಿಕ ಮೃತದೇಹವನ್ನು 35 ತುಂಡಗಳಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಟ್ಟು ನಂತರ ನಗರದ ಹಲವೆಡೆ ಮೃತ ದೇಹದ ತುಂಡುಗಳನ್ನು ಎಸೆದಿದ್ದ ಘಟನೆ ನಡೆದಿತ್ತು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಆದರೆ ಇದಕ್ಕೂ ಮೀರಿ ಇನ್ನಷ್ಟು ಕ್ರೂರವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊಲೆಯೊಂದು ನಡೆದಿದೆ. ಇಲ್ಲಿ ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಡಲಾಗಿದೆ. ಇನ್ನು ಕೂಡ ಕೊಲೆ ಆರೋಪಿ ಪತ್ತೆಯಾಗಿಲ್ಲ. ಮಹಿಳೆಯ ಕೊಲೆಯ ಸುತ್ತ ಹಲವಾರು ಅನುಮಾನಗಳು ವ್ಯಕ್ತವಾಗಿವೆ.

ವೈಯಾಲಿಕಾವಲ್​ನಲ್ಲಿ ನಡೆದಿರೊ ಮಹಾಲಕ್ಷ್ಮಿ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿರೊ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆ ರಹಸ್ಯ ಇನ್ನು ನಿಗೂಢವಾಗಿಯೇ ಉಳಿದಿದೆ. ಈ ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೃತಳ ತಾಯಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಹಾಲಕ್ಷ್ಮಿಯನ್ನು 50 ಪೀಸ್​ ಮಾಡಿದ ರಾಕ್ಷಸನಿಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ವಿಶೇಷ ತಂಡ ರಚಿಸಿದ್ದು, ಈಗಾಗಲೇ ಆರೋಪಿಯನ್ನ ಹುಡುಕಿಕೊಂಡು ಒಂದು ಟೀಮ್ ಪಶ್ಚಿಮ ಬಂಗಾಳಕ್ಕೆ ತೆರಳಿದೆ.

ಕೊಲೆ ಮಾಡಿ ಹೊರ ರಾಜ್ಯಕ್ಕೆ ಆರೋಪಿ ಎಸ್ಕೇಪ್ ಆಗಿರೋ ಮಾಹಿತಿಯಿದ್ದು, 150ಕ್ಕೂ CCTV ದೃಶ್ಯಗಳ ಪರಿಶೀಲನೆ, ಕುಟುಂಬಸ್ಥರು, ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಕ್ಕಪಕ್ಕದವರ ಹೇಳಿಕೆಗಳನ್ನು ಆಧರಿಸಿ ಆರೋಪಿಗೆ ಶೋಧ ನಡೆಯುತ್ತಿದ್ದು, ಮಹಾಲಕ್ಷ್ಮಿಯ ಸೋಷಿಯಲ್​ ಮೀಡಿಯಾ ಪೋಸ್ಟ್​ಗಳನ್ನು​ ಪರಿಶೀಲನೆ ಮಾಡಲಾಗುತ್ತಿದೆ.

ಪೊಲೀಸರು FSL ವರದಿ, ಪೋಸ್ಟ್​ ಮಾರ್ಟಂ ವರದಿ ಪರಿಶೀಲಿಸಿ ಕೊಲೆ ತನಿಖೆ ಚುರುಕುಗೊಳಿಸಿದ್ದು, ಐದು ಟೀಮ್​ಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಇನ್ನು ಒಬ್ಬನಿಗಿಂತ ಹೆಚ್ಚು ಮಂದಿ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪ್ಲಾನ್ ಏನೇನು?

  •  ಮಹಾಲಕ್ಷ್ಮಿ ಎಲ್ಲೆಲ್ಲಿ ಕೆಲಸ ಮಾಡ್ತಿದ್ಲು ಅಲ್ಲಿ ವಿಚಾರಣೆ ನಡೆಸೋದು.
  • ಜೊತೆಗೆ ಕಳೆದ ಮೂರು ತಿಂಗಳಿಂದ ಮಹಾಲಕ್ಷ್ಮಿ ಜೊತೆ ಸಂಪರ್ಕ ಇದ್ದವರ ಮಾಹಿತಿ ಕಲೆ ಹಾಕುವುದು.
  • ನಿತ್ಯ ಯಾರ ಜೊತೆಗೆ ಹೋಗ್ತಿದ್ಲು-ಬರ್ತಿದ್ಲು ಎಂಬ ಮಾಹಿತಿ ಕಲೆ ಹಾಕೋದು.
  • ಮಹಾಲಕ್ಷ್ಮೀ ಕೊನೆಯ ಬಾರಿ ಕೆಲಸಕ್ಕೆ ಹೋಗಿದ್ದ ಸಿಸಿಟಿವಿ ಚೆಕ್‌ ಮಾಡೋದು.
  • ಮಹಾಲಕ್ಷ್ಮೀ ಜೊತೆಗೆ ಯಾರು ಟಚ್‌ನಲ್ಲಿದ್ರು, ಅವರ ಮಾಹಿತಿ ಕಲೆ ಹಾಕುವುದು.
  • ಕೊನೆ ಬಾರಿಗೆ ಯಾರಿಗೆ ಮಹಾಲಕ್ಷ್ಮಿ ಕಾಲ್ ಮಾಡಿದ್ಲು ಅದರ ಬಗ್ಗೆ ಮಾಹಿತಿ ಸಂಗ್ರಹಿಸೋದು.
  • ಒಂದು ತಿಂಗಳಿನಿಂದ ಯಾರಿಗೆ ಹೆಚ್ಚು ಕರೆ ಮಾಡಿದ್ದಾಳೆ ಅಂತ ತನಿಖೆ ನಡೆಸಲಿದೆ.
  • ಯಾರಾದ್ರೂ ಹೊರ ರಾಜ್ಯದಲ್ಲಿ ಇರೋರು ಸಂಪರ್ಕದಲ್ಲಿ ಇದ್ರಾ? ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇರೋರು ಕೊಲೆ ಲೊಕೇಷನ್‌ನಲ್ಲಿ ಇದ್ರಾ?
  • ಇನ್ನು ಸ್ಥಳ ಮಹಜರು, ಪೋಸ್ಟ್ ಮಾರ್ಟಂಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಸಂಗ್ರಹಿಸಲಿದ್ದಾರೆ.

ಇದನ್ನೂ ಓದಿ : ತಿರುಪತಿ ಲಡ್ಡು ವಿವಾದ – ತನಿಖೆಗೆ ಎಸ್ಐಟಿ ರಚಿಸಿದ ಆಂಧ್ರ ಸರ್ಕಾರ..! –

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here