Download Our App

Follow us

Home » ಸಿನಿಮಾ » ಅದಿತಿ ಪ್ರಭುದೇವ ಮನೆಗೆ ಮಹಾಲಕ್ಷ್ಮೀ ಆಗಮನ – ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ..!

ಅದಿತಿ ಪ್ರಭುದೇವ ಮನೆಗೆ ಮಹಾಲಕ್ಷ್ಮೀ ಆಗಮನ – ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ..!

ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಯುಗಾದಿ ಹಬ್ಬದ ದಿನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅದಿತಿ ಪ್ರಭುದೇವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ವಿಷಯವನ್ನು ಯುಗಾದಿಯ ಶುಭ ದಿನವಾದ ನಿನ್ನೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು, ನೆಟ್ಟಿಗರು ದಂಪತಿಗೆ ಅಭಿನಂದನೆ ತಿಳಿಸಿ ಆಶೀರ್ವದಿಸುತ್ತಿದ್ದಾರೆ.

ಗ್ಲ್ಯಾಮರ್ ಜೊತೆಗೆ ಉತ್ತಮ ಅಭಿನಯದಿಂದ‌ ಗುರುತಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ, ಹೊಸ ವರ್ಷದಂದು ತಾಯಿ ಆಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. “ನಾನು‌ ಐದು ತಿಂಗಳ ಗರ್ಭಿಣಿ. ಈ ವರ್ಷ ಅಮ್ಮ ಆಗುತ್ತೀನಿ” ಎಂದು ಈ ವರ್ಷಾರಂಭ ಸೋಷಿಯಲ್​ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದರು. ಕಲರ್‌ಫುಲ್ ಬೇಬಿ ಬಂಪ್​​ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಅದಾದ ಬಳಿಕವೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಫೋಟೋಶೂಟ್​ಗಳ ಮೂಲಕ ಗಮನ ಸೆಳೆದಿದ್ದರು.

ಫೆಬ್ರವರಿ ಮಧ್ಯದಲ್ಲಿ ಸೀಮಂತ ಶಾಸ್ತ್ರದ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಅದಾದ ನಂತರ ತುಂಬು ಗರ್ಭಿಣಿಯ ಫೋಟೋಶೂಟ್​​ ಮಾಡಿಸಿ, ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್​ಗೆ ‘ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ’ ಎಂಬ ಕ್ಯಾಪ್ಶನ್​​ ಕೊಟ್ಟಿದ್ದರು. ಹೆರಿಗೆ ಒಳ್ಳೆಯದಾಗಲಿ ಎಂಬರ್ಥದಲ್ಲಿ ಕಾಮೆಂಟ್​ಗಳು ಹರಿದು ಬಂದಿದ್ದವು. ಫೈನಲಿ ಹೆರಿಗೆ ಯಾವುದೇ ತೊಂದರೆಗಳಿಲ್ಲದಂತೆ ನಡೆದಿದ್ದು, ಯುಗಾದಿಯ ವಿಶೇಷ ದಿನದಂದು ಶುಭಸುದ್ದಿ ಹಂಚಿಕೊಂಡಿದ್ದಾರೆ.

ಮಗು ಕಳೆದ ಗುರುವಾರವೇ ಜನಿಸಿದ್ದು, ನಟಿ ನಿನ್ನೆ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಗುವಿನ ಕೈ ಹಿಡಿದಿರುವ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ, ”4.4.2024. ನಮ್ಮನೆ ಮಹಾಲಕ್ಷ್ಮಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​​ಗೆ ಪತಿ ಯಶಸ್​ ಪ್ರತಿಕ್ರಿಯಿಸಿ, ”ನನ್ನ ಜೀವದ ಗೆಳತಿ ಅದಿತಿ. ನಿನ್ನ ಹಾಗೆಯೇ ನಮ್ಮ ಮಗಳು” ಎಂದು ತಿಳಿಸಿದ್ದಾರೆ. ಉಳಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಅಭಿನಂದನಾ ಸಂದೇಶದೊಂದಿಗೆ ಕಾಮೆಂಟ್ ಮಾಡುತ್ತಿದ್ದಾರೆ.

ನಟಿ ಅದಿತಿ ಪ್ರಭುದೇವ 2022ರ ನವೆಂಬರ್​ ಕೊನೆಗೆ ಉದ್ಯಮಿ ಯಶಸ್ ಜೊತೆ ಅದ್ಧೂರಿಯಾಗಿ ಹಸೆಮಣೆ ಏರಿದರು. ಕಿರುತೆರೆಯಿಂದ ವೃತ್ತಿಜೀವನ ಆರಂಭಿಸಿದ ಬೆಣ್ಣೆನಗರಿಯ ಚೆಲುವೆ ಧೈರ್ಯಂ ಸಿನಿಮಾ ಮೂಲಕ ಹಿರಿತೆರೆ ಪ್ರವೇಶಿಸಿದರು. ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಮ್ಯಾಟ್ನಿ, ಮಾಫಿಯಾ ಚಿತ್ರಗಳ ಮೂಲಕ ಸದ್ದು ಮಾಡುತ್ತಿದ್ದಾರೆ.

ಇದನ್ನೂ ಓದಿ : ಡಿವೋರ್ಸ್​ಗಾಗಿ ಕೊನೆಗೂ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್-ಐಶ್ವರ್ಯ ರಜನಿಕಾಂತ್..!

Leave a Comment

DG Ad

RELATED LATEST NEWS

Top Headlines

ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

Live Cricket

Add Your Heading Text Here