Download Our App

Follow us

Home » ಅಪರಾಧ » ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​​ ಪ್ರಕರಣ : ಹೆಚ್​.ಡಿ ರೇವಣ್ಣಗೂ ಲುಕ್​ಔಟ್ ನೋಟಿಸ್​ ಜಾರಿ..!

ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​​ ಪ್ರಕರಣ : ಹೆಚ್​.ಡಿ ರೇವಣ್ಣಗೂ ಲುಕ್​ಔಟ್ ನೋಟಿಸ್​ ಜಾರಿ..!

ಬೆಂಗಳೂರು : ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​​ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್​.ಡಿ.ರೇವಣ್ಣಗೂ ಲುಕ್​ಔಟ್ ನೋಟಿಸ್​ ಜಾರಿಯಾಗಿದೆ. ರೇವಣ್ಣ ವಿದೇಶಕ್ಕೆ ಎಸ್ಕೇಪ್​ ಆಗಿರುವ ಶಂಕೆ ಮೇಲೆ ನೋಟಿಸ್ ಜಾರಿ ಮಾಡಲಾಗಿದೆ. ಇದೀಗ ಮಗನ ಜತೆ ಅಪ್ಪನಿಗೂ ಲುಕ್​​ಔಟ್​ ನೋಟಿಸ್​ ಸಂಕಷ್ಟ ಎದುರಾಗಿದೆ.

ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ಈಗಾಗಲೇ ಲುಕ್‌ ಔಟ್ ನೋಟೀಸ್ ಜಾರಿ ಮಾಡಿ ಬಂಧನಕ್ಕೆ ಬಲೆ ಬೀಸಿದೆ. ಈ ಮೂಲಕ ವಿಮಾನ ನಿಲ್ದಾಣ, ಭೂ ಗಡಿ ಪ್ರದೇಶ ಅಥವಾ ಬಂದರುಗಳಲ್ಲಿ ಪತ್ತೆಯಾದರೂ ಬಂಧಿಸಲು ಮುಂದಾಗಿದೆ.

ಮತ್ತೊಂದೆಡೆ SIT ಪೊಲೀಸರು 40 ಕಡೆ ರೇಡ್ ಮಾಡಿದ್ದಾರೆ. ಕೆ.ಆರ್​​.ನಗರ, ಹೊಳೆ ನರಸೀಪುರ, ಬೆಂಗಳೂರು, ಮಂಡ್ಯ, ಮೈಸೂರಿನ ಹಲವು ಸ್ಥಳಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ರೇವಣ್ಣ ನಿವಾಸಗಳು, ರೇವಣ್ಣ, ಪ್ರಜ್ವಲ್​ಗೆ ಸೇರಿದ ಫಾರ್ಮ್​​ಹೌಸ್​ಗಳು, ರೇವಣ್ಣ ಸಂಬಂಧಿಕರ ಮನೆಗಳಲ್ಲಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಕೆ.ಆರ್​​.ನಗರ ಕೇಸ್​ನಲ್ಲಿ ಸಂತ್ರಸ್ತೆಯನ್ನು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಕೆ.ಆರ್​​.ನಗರದ ಸಂತ್ರಸ್ತೆ ಎಲ್ಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ.

ರೇವಣ್ಣ ಸಂತ್ರಸ್ಥೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಅರ್ಜಿಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಕೋರ್ಟ್, ಜಾಮೀನು ನೀಡದೇ ನಾಳೆಗೆ ವಿಚಾರಣೆ ಮುಂದೂಡಿದೆ. ಇದರಿಂದ ರೇವಣ್ಣಗೆ ನಿರಾಸೆಯಾಗಿದೆ.

ಇದನ್ನೂ ಓದಿ : ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಅತ್ಯಾಚಾರಿ : ಕಾಲಿಗೆ ಗುಂಡು ಹಾರಿಸಿದ ಪೊಲೀಸರು..!

Leave a Comment

DG Ad

RELATED LATEST NEWS

Top Headlines

ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ CA ಸೈಟ್ ವಾಪಸ್ ನೀಡಿದ ಖರ್ಗೆ ಫ್ಯಾಮಿಲಿ..!

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮಗೆ ನೀಡಿದ್ದ 14 ಸೈಟುಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್‌ ನೀಡಿದ್ದರು. ಸಿದ್ದು

Live Cricket

Add Your Heading Text Here