Download Our App

Follow us

Home » ಅಪರಾಧ » ರಾಜ್ಯದ ಹಲವೆಡೆ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್‌, ಎಲ್ಲೆಲ್ಲಿ?

ರಾಜ್ಯದ ಹಲವೆಡೆ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್‌, ಎಲ್ಲೆಲ್ಲಿ?

ದಾವಣಗೆರೆ : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 3.98 ಲಕ್ಷ ಹಣ ಜೊತೆಗೆ 21 ಮೊಬೈಲ್​ನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಳೆಹರಹಳ್ಳಿ ಬಳಿ ಚುನಾವಣಾ ಚೆಕ್​ಪೋಸ್ಟ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ದಾವಣಗೆರೆ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ವಿಜಯನಗರ : ಜಿಲ್ಲೆಯಲ್ಲಿ ದಾಖಲೆ ಇಲ್ಲದ 5.50 ಲಕ್ಷ ಹಣ ಪತ್ತೆಯಾಗಿದೆ. ಹೊಸಪೇಟೆಯ ಟಿಬಿ ಡ್ಯಾಂ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದಾಗ, ಕೊಪ್ಪಳದಿಂದ ಹೊಸಪೇಟೆಗೆ ಹೋಗ್ತಿದ್ದ ಬೈಕ್​​ನಲ್ಲಿ ಹಣ ಸಿಕ್ಕಿದೆ. ಟಿಬಿ ಡ್ಯಾಂ ಸಿಪಿಐ ಶ್ರೀಕಾಂತ್ ಎವಿ, ಪಿಎಸ್ಐ ಶೀಲಾ ಮೂಗಣ್ಣನವರ್,ಕ್ರೈಂ ಪಿಎಸ್ಐ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೀತು. ಹಣಕ್ಕೆ ದಾಖಲೆ ನೀಡುವಂತೆ ಬೈಕ್​ ಸವಾರನಿಗೆ ಸೂಚಿಸಿದ್ದಾರೆ.

ಚಿತ್ರದುರ್ಗ : ಚಿತ್ರದುರ್ಗ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 108 ಸೀರೆಗಳ ಜಪ್ತಿ ಮಾಡಲಾಗಿದೆ. ನಗರದ JMIT ಬಳಿ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ವೇಳೆ ಪತ್ತೆಯಾಗಿದ್ದು, ಬ್ಯಾಗ್​ಗಳಲ್ಲಿ ತುಂಬಿಸಿ ಕಾರಿನಲ್ಲಿ ಸಾಗಿಸಲಾಗುತ್ತಿತ್ತು.  ಸೀರೆ ಸಮೇತ ಕಾರ್​ನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಳ್ಳಾರಿ : ಸಿಂದವಾಳ ಗ್ರಾಮದ ಬಳಿಯ ಚೆಕ್​ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 26 ಕೆಜಿ ಬೆಳ್ಳಿ ಮತ್ತು 3.55 ಲಕ್ಷ ರೂ. ಹಣವನ್ನು ಬಳ್ಳಾರಿಯಿಂದ ಆಂಧ್ರದ ಆದೋನಿ ಕಡೆ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here