ಬೆಂಗಳೂರು : ಪ್ರಜ್ವಲ್ ಪೆನ್ಡ್ರೈವ್ ಲೀಕ್ನಲ್ಲಿ ನಮ್ಮ ಕೈವಾಡ ಇಲ್ಲ. ಡಿಕೆಶಿಯವರಿಗೂ ಪೆನ್ಡ್ರೈವ್ಗೂ ಸಂಬಂಧ ಇಲ್ಲ. ಕುಮಾರಸ್ವಾಮಿಯೇ ಪೆನ್ಡ್ರೈವ್ ಲೀಕ್ ಮಾಡಿರಬಹುದು. ಯಾಕಂದ್ರೆ ಪೆನ್ಡ್ರೈವ್ ವಿಚಾರ ಅವರಿಗೇ ಮೊದಲು ಗೊತ್ತಿತ್ತು ಎಂದು ಹೇಳಿಕೆ ನೀಡುವ ಮೂಲಕ ಸಂಸದ ಡಿ.ಕೆ.ಸುರೇಶ್ ಬಿಗ್ ಬಾಂಬ್ ಸಿಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಸಂಬಂಧಿಸಿದಂತೆ ಹೆಚ್ಡಿಕೆ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್ ಅವರು, ಡಿಕೆಶಿ ನೆನಪಿಸಿಕೊಳ್ಳದಿದ್ರೆ ಹೆಚ್ಡಿಕೆಗೆ ನಿದ್ದೆ ಬರಲ್ಲ, ತಿಂದಿದ್ದು ಜೀರ್ಣ ಆಗಲ್ಲ. ನಮಗೆ ಆ ಉದ್ದೇಶ ಇದ್ದಿದ್ರೆ ಎಲೆಕ್ಷನ್ಗೆ 10 ದಿನ ಮುನ್ನವೇ ಲೀಕ್ ಆಗ್ತಿತ್ತು ಎಂದು ಹರಿಹಾಯ್ದಿದ್ದಾರೆ.
ಇನ್ನು ಕೆಲವರು ತಮ್ಮ ಉಳಿವಿಗಾಗಿ ಡಿಕೆಶಿ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಸೂರಜ್ ರೇವಣ್ಣ ಡಿಕೆಶಿಯನ್ನು ಕೆಲಸ ಕಾರ್ಯಕ್ಕೆ ಭೇಟಿ ಆಗಿರಬಹುದು. ಶಾಸಕರ ಬಗ್ಗೆ ಬಂದಿರೋ ಆರೋಪದ ಬಗ್ಗೆ ಸಂತ್ರಸ್ತೆ ದೂರು ಕೊಡಲಿ. ಇಂಥಾ 108 ವಿಡಿಯೋಗಳಿವೆ, ಬಾಂಬೆ ಬ್ಲೂ ಬಾಯ್ಸ್ ವಿಡಿಯೋ ಇಲ್ವಾ..? ಯೋಗೇಶ್ವರ್ ಮಠ ಮಂದಿರಗಳಿಗೆಲ್ಲಾ ಅಲೆದಾಡಿದ್ಯಾಕೆ..? ನೂಲಿನಂತೆ ಸೀರೆ ಅಂತಾರಲ್ಲ ಅಂಥಾ ಪರಿಸ್ಥಿತಿ ಈಗಿದೆ. ಈ ಪ್ರಕರಣದ ಬಗ್ಗೆ SIT ತನಿಖೆ ನಂತರ ಎಲ್ಲವೂ ಗೊತ್ತಾಗಲಿದೆ ಎಂದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಎರಡು ಗಂಪುಗಳ ನಡುವೆ ಮಾರಾಮಾರಿ : ಅಸಲಿಗೆ ಆಗಿದ್ದೇನು ಗೊತ್ತಾ?