Download Our App

Follow us

Home » ಜಿಲ್ಲೆ » ಕೋಲಾರ: ಶ್ರೀರಾಮನ ಕಟೌಟ್, ಪ್ಲೆಕ್ಸ್​​ನ್ನು ಬ್ಲೇಡ್​​ನಿಂದ ಹರಿದ ಕಿಡಿಗೇಡಿಗಳು..!

ಕೋಲಾರ: ಶ್ರೀರಾಮನ ಕಟೌಟ್, ಪ್ಲೆಕ್ಸ್​​ನ್ನು ಬ್ಲೇಡ್​​ನಿಂದ ಹರಿದ ಕಿಡಿಗೇಡಿಗಳು..!

ಕೋಲಾರ : ಶ್ರೀರಾಮನ ಕಟೌಟ್​ ಹಾಗೂ ಫ್ಲೆಕ್ಸ್​ನ್ನು ದುಷ್ಕರ್ಮಿಗಳು ಬ್ಲೇಡ್​ನಿಂದ ಹರಿದ ಘಟನೆ ಕೋಲಾರದ ಮುಳಬಾಗಿಲು ಪಟ್ಟಣದ ಗುಣಗಂಟೆಪಾಳ್ಯದಲ್ಲಿ ನಡೆದಿದೆ. ಬ್ಯಾನರ್​​ ಹರಿದು ಹಾಕಿರೋದಕ್ಕೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ಕಳೆದ ರಾತ್ರಿ 10.44ರ ಸುಮಾರಿಗೆ ಕಿಡಿಗೇಡಿಗಳು ಫ್ಲೆಕ್ಸ್​ಗಳಿಗೆ ಬ್ಲೇಡ್​ ಹಾಕಿ ಹರಿದಿದ್ದಾರೆ.

ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಲವಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​​ ಮತ್ತು ಪುತ್ರ ಅಯೋಧ್ಯೆ ಧ್ರುವ ಚಾರಿಟಬಲ್​​ ಟ್ರಸ್ಟ್​​ ವತಿಯಿಂದ ನಗರದಲ್ಲಿ ರಾಮನ ಶೋಭಾಯಾತ್ರೆ, ಸೀತರಾಮ ಕಲ್ಯಾಣೋತ್ಸವ ಮತ್ತು ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನಾಂಕ 21 ಮತ್ತು 22 ರಂದು ಎರಡು ದಿನ ಈ ಕಾರ್ಯಕ್ರಮಗಳು ನಡೆಯಲಿದ್ದವು.

ಹೀಗಾಗಿ ನಗರದಲ್ಲಿ ಬ್ಯಾನರ್​ ಮತ್ತು ಶ್ರೀರಾಮ ಕಟೌಟ್​ ನಿಲ್ಲಿಸಲಾಗಿತ್ತು. ಈ ಬ್ಯಾನರ್​ ಮತ್ತು ಕಟ್​ಔಟ್​​ಗಳನ್ನು ನಿನ್ನೆ ರಾತ್ರಿ 10.44ರ ಸುಮಾರಿಗೆ ಯಾರೋ ದುಷ್ಕರ್ಮಿಗಳು ಬ್ಲೇಡ್​ನಿಂದ ಹರಿದು ಹಾಕಿದ್ದಾರೆ. ಶ್ರೀರಾಮನ ಕಟೌಟ್​ನ್ನು ಹರಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಶ್ರೀರಾಮನ ಭಕ್ತರು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದಕ್ಕಾಗಿ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಪ್ರೊಟೆಸ್ಟ್​ ಮಾಡಿದ್ದಾರೆ. ಈ ಪ್ರತಿಭಟನೆಗೆ ಸಂಸದ ಎಸ್​.ಮುನಿಸ್ವಾಮಿ ಸೇರಿ ಹಲವರು ಸಾಥ್​​​ ನೀಡಿದ್ದಾರೆ. ಮುಳಬಾಗಿಲು ನಗರ ಪೊಲೀಸರ ಭೇಟಿ ನೀಡಿ CCTV ಪರಿಶೀಲನೆ ಮಾಡಿದ್ದಾರೆ. ಮುಳಬಾಗಿಲು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಆಧಾರ್ ಕಾರ್ಡ್ ಮತ್ತು ಫಿಂಗರ್ ಪ್ರಿಂಟ್ ಬಳಸಿ ಬ್ಯಾಂಕ್​ನಲ್ಲಿದ್ದ ಹಣ ವಂಚನೆ ಕೇಸ್ : ಆರೋಪಿಗಳು ಅರೆಸ್ಟ್..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here