Download Our App

Follow us

Home » ಸಿನಿಮಾ » ಬಿಗ್​ಬಾಸ್​​ ನಿರೂಪಣೆಗೆ ವಿದಾಯ.. ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಭಾರೀ ಬೇಸರ..!

ಬಿಗ್​ಬಾಸ್​​ ನಿರೂಪಣೆಗೆ ವಿದಾಯ.. ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಭಾರೀ ಬೇಸರ..!

ಕಿಚ್ಚ ಸುದೀಪ್​​ ಬಿಗ್​ಬಾಸ್​​ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೇಸರದ ಪೋಸ್ಟ್​ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸತತ 11 ವರ್ಷಗಳಿಂದ ಕಿಚ್ಚ ಸುದೀಪ್​ ಕನ್ನಡದ ಬಿಗ್​ಬಾಸ್​ ಅನ್ನು ನಿರೂಪಿಸುತ್ತಾ ಬಂದಿದ್ದಾರೆ. ಸುದೀಪ್​ಗೆ ಸುದೀಪೇ ಸಾಟಿ ಎನ್ನುವ ಮಟ್ಟಕ್ಕೆ ಸುದೀಪ್ ಈ ಒಂದು ಕಾರ್ಯಕ್ರಮವನ್ನ ಹೆಗಲು ಮೇಲೆ ಹೊತ್ತುಕೊಂಡು ಸರಾಗವಾಗಿ ನಡೆಸಿಕೊಡುತ್ತಾ ಬಂದಿದ್ದಾರೆ. ಆದರೀಗ ಬಿಗ್​ಬಾಸ್​ಗೆ ವಿದಾಯ ಹೇಳಲು ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್​, ಬಿಗ್​ಬಾಸ್ 11ನೇ ಸೀಸನ್​ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ಹೇಳಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸುದೀಪ್​ ಬಿಗ್ ಬಾಸ್ 11 ಕ್ಕೆ ಉತ್ತಮ ರೆಸ್ಪಾನ್ಸ್ ಕೊಟ್ಟಿರುವುದಕ್ಕೆ ಧನ್ಯವಾದಗಳು. ನನ್ನ ಹಾಗೂ ಶೋ ಮೇಲೆ ನಿಮಗೆಷ್ಟು ಪ್ರೀತಿ ಇದೆ ಎಂಬುದು ಮೊದಲ ವಾರ ಬಂದಿರುವ ಟಿವಿಆರ್ ನಿಂದಲೇ ತಿಳಿಯುತ್ತಿದೆ. 11 ವರ್ಷ ಈ ಪಯಣ ಅದ್ಭುತ. ಇದು ನನ್ನ ಕೊನೆಯ ಸೀಸನ್. ನನ್ನ ನಿರ್ಧಾರವನ್ನ ಚಾನಲ್ ಮತ್ತು ಇಷ್ಟು ವರ್ಷ ಬಿಗ್​ಬಾಸ್ ವೀಕ್ಷಿಸಿದ ಜನರು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಅಂತಾ ಹೇಳಿದ್ದಾರೆ.

ಇನ್ನು ಸೀಸನ್​​ 11ಕ್ಕೂ ಮುಂಚೆಯೇ ಸುದೀಪ್​​ ಹೋಸ್ಟ್​​ ಮಾಡಲ್ಲ ಅನ್ನೋ ಚರ್ಚೆ ಹಬ್ಬಿತ್ತು.. ಈಗ 11 ಬದಲಿ 12ರ ಸೀಸನ್​​ನಲ್ಲಿ ಸುದೀಪ್​​ ಕಾಣಿಸಲ್ಲ ಅನ್ನೋದು ಅಭಿಮಾನಿಗಳಿಗಂತೂ ನಿಜಕ್ಕೂ ಬೇಸರ ತಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಬೇಸರದ ಪೋಸ್ಟ್​ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇಂತಹ ನಿರ್ಧಾರಕ್ಕೆ ಕಾರಣವೇನು ಅನ್ನೋದಕ್ಕೆ ಫಾನ್ಸ್‌ಗೆ ಕಿಚ್ಚನೇ ಉತ್ತರ ನೀಡಬೇಕು.

ಇದನ್ನೂ ಓದಿ : ನಟ ದರ್ಶನ್‌ ಪಾಲಿಗೆ ಇಂದು ಬಿಗ್ ಡೇ – ಜಾಮೀನು ಭವಿಷ್ಯ ನಿರ್ಧಾರ..!

 

 

 

Leave a Comment

DG Ad

RELATED LATEST NEWS

Top Headlines

ಪ್ಲೀಸ್‌ ಒಂದು ಚಾನ್ಸ್​ ಕೊಡಿ ಬಿಗ್​ಬಾಸ್… ಜಗದೀಶ್, ರಂಜಿತ್ ಹೊರಹೋಗ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು..!

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆಯುತ್ತಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ

Live Cricket

Add Your Heading Text Here