Download Our App

Follow us

Home » ಅಪರಾಧ » ದೆಹಲಿ ಸಿಎಂ ಕೇಜ್ರಿವಾಲ್​​​ಗೆ ಬಿಗ್​ ರಿಲೀಫ್​​​ – ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್..!

ದೆಹಲಿ ಸಿಎಂ ಕೇಜ್ರಿವಾಲ್​​​ಗೆ ಬಿಗ್​ ರಿಲೀಫ್​​​ – ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್..!

ದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​​ಗೆ ಕೊನೆಗೂ ಬಿಗ್​ ರಿಲೀಫ್​​​ ಸಿಕ್ಕಿದೆ. ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಕಳೆದ ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಇಂದು ಸುಪ್ರೀಂಕೋರ್ಟ್ ಕೇಜ್ರಿವಾಲ್​​​ಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಜೂನ್​​​ 1ರವರೆಗೂ ಕೋರ್ಟ್​ ಜಾಮೀನು ನೀಡಿದ್ದು, ಜೂನ್​​ 2 ರಂದು ಕೋರ್ಟ್​ ಮುಂದೆ ಹಾಜರಾಗಲು ಸೂಚನೆ ನೀಡಿದೆ.

ಲೋಕಸಭೆ ಎಲೆಕ್ಷನ್​​​ ಪ್ರಚಾರದಲ್ಲಿ ಪಾಲ್ಗೊಳ್ಳಲು ಕೋರ್ಟ್​ ಅವಕಾಶ ನೀಡಿದೆ. ಕೇಜ್ರಿವಾಲ್​​​ ಬೇಲ್​ಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದೀಗ ದೆಹಲಿ ಸಿಎಂ ಕೇಜ್ರಿವಾಲ್​​​ಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

ಇನ್ನು 21 ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳಬಹುದು, ಈ ಅವಧಿಯಲ್ಲಿ ಮುಖ್ಯಮಂತ್ರಿ ಜವಾಬ್ದಾರಿಯನ್ನ ನಿರ್ವಹಿಸುವಂತಿಲ್ಲ. ಚುನಾವಣಾ ಪ್ರಚಾರದಲ್ಲಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು, ಆಡಳಿತಾತ್ಮಕ ನಿರ್ಧಾರ ಮಾಡಿದ್ರೆ ಬೇಲ್​ ಕ್ಯಾನ್ಸಲ್​ ಆಗಲಿದೆ ಎಂದು ಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ : ರಾಜ್ಯದ ಪ್ರತಿ ಗೃಹಿಣಿಯರನ್ನು ಸಂಭ್ರಮಿಸೋಕೆ ಬಹುಮಾನಗಳನ್ನು ಹೊತ್ತು ಬರ್ತಿದೆ “ಸುವರ್ಣ ಗೃಹಮಂತ್ರಿ” ರಿಯಾಲಿಟಿ ಶೋ..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here