ಬೆಂಗಳೂರು : ಜೈಲಿನಿಂದ ಬಂದ್ಮೇಲೆ ಕೇಜ್ರಿವಾಲ್ಗೆ ಬುದ್ಧಿ ಭ್ರಮಣೆಯಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರನಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಕೇಜ್ರಿವಾಲ್ ಒಬ್ಬ ಹುಚ್ಚ, ಹೊರಗೆ ಬಂದು ಸುಳ್ಳು ಹೇಳಬೇಡಿ. ಕೇಜ್ರಿವಾಲ್ ಜೈಲಿನಲ್ಲಿ ಕೈದಿಗಳ ಜೊತೆ ಇದ್ದು ಮಾನಸಿಕ ಸ್ಥಿಮಿತೆ ಕಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೇಜ್ರಿವಾಲ್ ರೆಸ್ಟ್ ತೆಗೆದುಕೊಳ್ಳಲಿ, ಮತ್ತೆ ಜೈಲಿಗೆ ಹೋಗಬೇಕು. ಬಿಜೆಪಿಯಲ್ಲಿ 75 ವರ್ಷಕ್ಕೆ ನಿವೃತ್ತಿ ಅನ್ನುವ ನಿಯಮ ಇಲ್ಲ. ಪ್ರಧಾನಿಯಾಗಿ ಮೋದಿಯವರು ಮುಂದುವರೆಯುತ್ತಾರೆ.
ಮುಂದಿನ ಐದು ವರ್ಷ ಪೂರ್ಣಾವಧಿಗೆ ಮೋದಿಯವರೇ ಪ್ರಧಾನಿ ಎಂದು ಬೆಂಗಳೂರನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯಕ್ಕೆ ಪ್ರಜ್ವಲ್ ರೇವಣ್ಣ ಬರೋದು ಡೌಟ್ – ಮೇ15ರಂದು ಬುಕ್ ಆಗಿದ್ದ ಫ್ಲೈಟ್ ಟಿಕೆಟ್ ಕ್ಯಾನ್ಸಲ್..!
Post Views: 33