Download Our App

Follow us

Home » ರಾಷ್ಟ್ರೀಯ » ಕರ್ನಾಟಕದ ರಸ್ತೆ ಯೋಜನೆಗಳಿಗೆ 1385 ಕೋಟಿ ರೂ. ಅನುದಾನ ಮಂಜೂರು : ಸಚಿವ ನಿತಿನ್ ಗಡ್ಕರಿ..!

ಕರ್ನಾಟಕದ ರಸ್ತೆ ಯೋಜನೆಗಳಿಗೆ 1385 ಕೋಟಿ ರೂ. ಅನುದಾನ ಮಂಜೂರು : ಸಚಿವ ನಿತಿನ್ ಗಡ್ಕರಿ..!

ನವದೆಹಲಿ : ಕರ್ನಾಟಕದ ರಸ್ತೆ ಯೋಜನೆಗಳಿಗೆ 1385.60 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ನಿನ್ನೆ ತಿಳಿಸಿದ್ದಾರೆ.

ಯೋಜನೆಗಳು ವಿವಿಧ ಜಿಲ್ಲೆಗಳಲ್ಲಿ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿಯಲ್ಲಿ ಒಟ್ಟು 2055.62 ಕಿ.ಮೀ. ಉದ್ದದ 295 ರಸ್ತೆ ಅಭಿವೃದ್ಧಿ ಯೋಜನೆಗಳ ವರ್ಧನೆ ಮತ್ತು ಬಲವರ್ಧನೆಯನ್ನು ಒಳಗೊಂಡಿವೆ ಎಂದು ಸಚಿವರು ಹೇಳಿದ್ದಾರೆ. ಈ ಪ್ರಯತ್ನವು ರಾಜ್ಯದಲ್ಲಿ ಮೂಲಸೌಕರ್ಯವನ್ನು ನವೀಕರಿಸುತ್ತದೆ ಮತ್ತು ಇದು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದರು.

ಇತ್ತೀಚಿಗೆ ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿದ್ದ 22 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಮಾತನಾಡಿ, ಕರ್ನಾಟಕದ ರಸ್ತೆಗಳ ಚಿತ್ರಣ 2024 ರ ಮುಕ್ತಾಯದ ವೇಳೆಗೆ ಕರ್ನಾಟಕದ ರಸ್ತೆಗಳ ಚಿತ್ರಣ ಬದಲಾಗಲಿದ್ದು, ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ ಎಂದು ಹೇಳಿದ್ದರು. ಇದೀಗ ಇದರ ಬೆನ್ನಲ್ಲೇ ನಿತಿನ್ ಗಡ್ಕರಿ ಅವರು ಅನುದಾನ ಬಿಡುಗಡೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.

ಮೈಸೂರು, ಹಾಸನಕ್ಕೆ ರಿಂಗ್ ರಸ್ತೆ ಮಾಡಿಸುತ್ತೇನೆ. ಕುಶಾಲನಗರ – ಮಾಣಿ ರಸ್ತೆಗೆ ಡಿಪಿಆರ್ ಮಾಡಿಸುತ್ತೇವೆ ಎಂದು ನಿತಿನ್ ಗಡ್ಕರಿ ಹೇಳಿದ್ದರು. ಹಾಗೆಯೇ ಮೈಸೂರು- ನಂಜನಗೂಡು 6 ಪಥದ ರಸ್ತೆ ಕಾಮಗಾರಿ ಶೀರ್ಘದಲ್ಲೇ ಆರಂಭಗೊಳ್ಳಲಿದೆ. ಬೆಂಗಳೂರು-ಚೆನ್ನೈ ನಡುವೆ 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು ಎಂದಿದ್ದರು. ಬೆಂಗಳೂರಿನ ರಿಂಗ್ ರಸ್ತೆ ಮುಖ್ಯ. 280 ಕಿ.ಮೀ. ರಿಂಗ್ ರಸ್ತೆ ಡಿಸೆಂಬರ್‌ನಲ್ಲಿ ಪೂರ್ಣವಾಗಲಿದೆ. ಇದರಿಂದ ಬೆಂಗಳೂರು ಟ್ರಾಫಿಕ್ ಜಾಮ್ ಮುಕ್ತವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ಇದನ್ನೂ ಓದಿ : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್ – ಮೂವರು ಆರೋಪಿಗಳಿಗೆ ಜಾಮೀನು ಮಂಜೂರು..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here