Download Our App

Follow us

Home » ರಾಜ್ಯ » ಕರ್ನಾಟಕದಲ್ಲಿಂದು ಐತಿಹಾಸಿಕ ಬೆಳವಣಿಗೆ – ಮುಂಡಗಾರು ಲತಾ ಸೇರಿ 6 ನಕ್ಸಲರು ಶರಣಾಗತಿ.. ಪ್ರಕ್ರಿಯೆ ಹೇಗಿರಲಿದೆ?

ಕರ್ನಾಟಕದಲ್ಲಿಂದು ಐತಿಹಾಸಿಕ ಬೆಳವಣಿಗೆ – ಮುಂಡಗಾರು ಲತಾ ಸೇರಿ 6 ನಕ್ಸಲರು ಶರಣಾಗತಿ.. ಪ್ರಕ್ರಿಯೆ ಹೇಗಿರಲಿದೆ?

ಚಿಕ್ಕಮಗಳೂರು : ಇಂದು (ಜ.08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಮೂಲದ 6 ಮೋಸ್ಟ್‌ ವಾಂಟೆಡ್‌ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಯಾಗಲಿದ್ದಾರೆ.

ಹೌದು.. ರಾಜ್ಯದಲ್ಲಿ ಸಾಕೇತ್​ ರಾಜನ್ ಕಾಲದಲ್ಲಿ ಉತ್ತುಂಗದಲ್ಲಿದ್ದ ನಕ್ಸಲ್ ಚಳವಳಿ ಶೀಘ್ರವಾಗಿ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ಇತ್ತೀಚೆಗೆ ನಕ್ಸಲ್ ನಾಯಕ ವಿಕ್ರಂಗೌಡ ಪೊಲೀಸರ ಎನ್​ಕೌಂಟರ್​ನಲ್ಲಿ ಬಲಿಯಾದ​ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಸದ್ಯ ರಾಜ್ಯದಲ್ಲಿ ಆ್ಯಕ್ಟೀವ್​ ಆಗಿರುವ 6 ಮಂದಿ ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆ. ಇಂದೇ 6 ಮಂದಿ ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ. ಮಾಜಿ ನಕ್ಸಲರಾದ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆಯಲಿದ್ದು, ಈಗಾಘಲೇ ಚಿಕ್ಕಮಗಳೂರಲ್ಲಿ ಸಕಲ ಸಿದ್ದತೆಗಳು ನಡೆದಿದೆ. ಶರಣಾಗತಿಗೂ ಮುನ್ನ ನಕ್ಸಲರು ಕಾಡಿನಲ್ಲಿ ನಿನ್ನೆ ತಮ್ಮ ಕಟ್ಟಕಡೆಯ ಮೀಟಿಂಗ್ ನಡೆಸಿದ್ದಾರೆ.

ಮುಂಡುಗಾರು ಲತಾ
ಮುಂಡುಗಾರು ಲತಾ

ಇಂದು ಬೆಳಗ್ಗೆ ಆಗಮನ : ಬೆಳಗ್ಗೆ 10 ಗಂಟೆ ವೇಳೆಗೆ 6 ಮಂದಿ ನಕ್ಸಲರು ಚಿಕ್ಕಮಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಅವರಿಗೆ ಪ್ರವಾಸಿ ಮಂದಿರದ ಬಳಿ ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ನಾಯಕರು ಬರಮಾಡಿಕೊಳ್ಳಲಿದ್ದು, ನಕ್ಸಲರನ್ನು ಅವರ ಸಂಬಂಧಿಕರು ಭೇಟಿ ಮಾಡಲಿದ್ದಾರೆ. ನಂತರ ನಕ್ಸಲರನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಎದುರು ಹಾಜರುಪಡಿಸಲಿದ್ದಾರೆ. ಆ ಬಳಿಕ ಪೊಲೀಸರು ನಕ್ಸಲರನ್ನು ವಶಕ್ಕೆ ಪಡೆದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಈ ಮೂಲಕ ದಶಕಗಳ ಕಾಲ ರಾಜ್ಯದಲ್ಲಿ ಅದರಲ್ಲೂ ಮಲೆನಾಡು ಭಾಗದಲ್ಲಿ ತೀವ್ರವಾಗಿದ್ದ ನಕ್ಸಲ್ ಹೋರಾಟಕ್ಕೆ ಇಂದೇ ಬಹುತೇಕ ತೆರೆ ಬಿದ್ದಂತಾಗಲಿದೆ. ಸಮಾಜದಲ್ಲಿ ಸಮಾನತೆ, ಅರಣ್ಯ ವಾಸಿಗಳ ಬದುಕಿಗಾಗಿ ಹೋರಾಟ, ಆದಿವಾಸಿಗಳಿಗೆ ದಕ್ಕಬೇಕಾದ ಹಕ್ಕುಗಳು, ಅರಣ್ಯ ನಾಶ, ಒಕ್ಕಲೆಬ್ಬಿಸುವಿಕೆ ವಿರುದ್ಧ ಹೋರಾಟ ಸೇರಿ ಸಮ ಸಮಾಜದ ನಿರ್ಮಾಣಕ್ಕೆ ಕನಸು ಹೊತ್ತ ನಕ್ಸಲರ ಹೋರಾಟ ಇಂದು ಅಂತ್ಯವಾಗಲಿದೆ.

ಮುಖ್ಯವಾಹಿನಿಗೆ ಬರುವ ನಕ್ಸಲರು ಯಾರ್ ಯಾರು?

1) ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ),
2) ವನಜಾಕ್ಷಿ (ಬಾಳೆಹೊಳೆ ಕಳಸ)
3) ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
4) ಮಾರಪ್ಪ ಅರೋಳಿ (ರಾಯಚೂರು)
5) ವಸಂತ ಟಿ (ತಮಿಳುನಾಡು)
6) ಎನ್. ಜೀಶಾ (ಕೇರಳ)

ಮುಖ್ಯವಾಹಿಗೆ ಬರುವ ನಕ್ಸಲರಿಗೆ ನೆರವು : ಸಿಎಂ ಸಿದ್ದರಾಮಯ್ಯ ಭರವಸೆ : ಕರ್ನಾಟಕದ ಎಲ್ಲ ನಕ್ಸಲರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರ ಬಯಸುತ್ತದೆ. ನಕ್ಸಲರು ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರ್ಕಾರವು ನೀತಿ ರೂಪಿಸಿದೆ. ಈ ನೀತಿಯನ್ನು ಸರಳೀಕರಣಗೊಳಿಸಿ, ಸಮರ್ಪಕವಾಗಿ ಜಾರಿ ಮಾಡಲಾಗುವುದೆಂದು ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.

ನಕ್ಸಲರ ಶರಣಾಗತಿ ನೀತಿಯನ್ವಯ ಹಂತ ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು ಹಾಗೂ ಆಯುಧಗಳನ್ನು ಸರ್ಕಾರಕ್ಕೆ ಅದ್ಯಾರ್ಪಣೆ ಮಾಡುವ ನಕ್ಸಲಯರಿಗೆ ಪ್ರೋತ್ಸಾಹಧನ, ಕೌಶಲ್ಯ ತರಬೇತಿ ನೀಡುವುದಲ್ಲದೆ ಅವರಿಗೆ ಪುನರ್ವಸತಿಗೂ ಸಹ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮವಹಿಸಲಾಗುವುದು ಎಂದು ಸಿಎಂ ತಿಳಿಸಿದ್ದರು. ಇನ್ನು ಅವರ ಮೇಲಿನ ಮೊಕದ್ದಮೆ/ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಹಾಗೂ ಅವರಿಗೆ ಕಾನೂನಿನ ನೆರವು ಸಹ ನೀಡಲಾಗುವುದು. ಈಗಾಗಲೇ ಶರಣಾಗತರಾದ ನಕ್ಸಲರ ಅಗತ್ಯಗಳನ್ನು ಸಹ ಗುರುತಿಸಿ ಅವರಿಗೂ ಸಹ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು

ಇದನ್ನೂ ಓದಿ : 39ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್​ – ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಗೋವಾದಲ್ಲಿ ಬರ್ತಡೇ ಸೆಲೆಬ್ರೇಷನ್..!

Leave a Comment

DG Ad

RELATED LATEST NEWS

Top Headlines

“ಫಾರೆಸ್ಟ್”ಚಿತ್ರದ “ಪೈಸಾ ಪೈಸಾ ಪೈಸಾ” ಹಾಡಿಗೆ ಫ್ಯಾನ್ಸ್ ಫಿದಾ – ಅಡ್ವೆಂಚರ್ಸ್ ಕಾಮಿಡಿಯ ಸಿನಿಮಾ ಜನವರಿ 24ಕ್ಕೆ ರಿಲೀಸ್!

ಬೆಂಗಳೂರು : ಆರಂಭದಿಂದಲೂ ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ 5

Live Cricket

Add Your Heading Text Here