Download Our App

Follow us

Home » ರಾಜ್ಯ » ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ : ಮಾ.20ರೊಳಗೆ ಅಳವಡಿಸುವಂತೆ ಕರವೇ ಎಚ್ಚರಿಕೆ..!

ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ : ಮಾ.20ರೊಳಗೆ ಅಳವಡಿಸುವಂತೆ ಕರವೇ ಎಚ್ಚರಿಕೆ..!

ರಾಜ್ಯದಲ್ಲಿ ಶೇ.60ರಷ್ಟು ಕನ್ನಡ ಇರುವ ನಾಮಫಲಕ ಅಳವಡಿಕೆಗೆ ಮತ್ತೆ ಡೆಡ್ ಲೈನ್ ವಿಸ್ತರಣೆ ಮಾಡಲಾಗಿದ್ದು, ವ್ಯಾಪಾರಿಗಳಿಗೆ ಕರವೇ ಮತ್ತೆ ಬಿಗ್ ರಿಲಿಫ್ ನೀಡಿದೆ. ಒಂದು ವಾರಗಳ ಕಾಲ ಕಡ್ಡಾಯ ಕನ್ನಡ ನಾಮಫಲಕ ಅಚವಡಿಕೆ ಗಡುವು ವಿಸ್ತರಣೆ ಮಾಡಲಾಗಿದೆ. 

ರಾಜ್ಯ ರಾಜಧಾನಿಯಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗಾಗಿ ಕನ್ನಡ ಪರ ಸಂಘಟನೆಗಳು ಈ ಹಿಂದೆ ರಣಕಹಳೆ ಮೊಳಗಿಸಿದ್ವು, ಸಿಕ್ಕ ಸಿಕ್ಕ ಅನ್ಯ ಭಾಷಾ ನಾಮಫಲಕ ಹೊಡೆದುಹಾಕಿದ್ದ ಹೋರಾಟಗಾರರ ಒತ್ತಡಕ್ಕೆ ಮಣಿದ ಸರ್ಕಾರ ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಿತ್ತು.

ಸಿಲಿಕಾನ್ ಸಿಟಿಯಲ್ಲಿ ನಡೆದ ಕನ್ನಡದ ಕ್ರಾಂತಿಗೆ ಬಾರಿ ಜಯ ಕೂಡ ಸಿಕ್ಕಿತ್ತು. ಬರಿ 1500 ಅಂಗಡಿಗಳು ಮಾತ್ರ ಕನ್ನಡ ನಾಮ ಫಲಕ ಅಳವಡಿಸಲು ಬಾಕಿ ಇದ್ದು, ಈ ಹಿನ್ನಲೆ ಆ ವ್ಯಾಪಾರಿಗಳಿಗೆ ಕರವೇ ಮತ್ತೊಂದು ಅವಕಾಶ ನೀಡಿದೆ. ಅದಷ್ಟೂ ಬೇಗ ಉಳಿದ ವ್ಯಾಪಾರಿಗಳು‌ ನಾಮಫಲಕ ಬದಲಾಯಿಸುವಂತೆ ಎಚ್ಚರಿಕೆ ನೀಡಿದೆ.

ಇದೀಗ ಕರವೇ ಮಾರ್ಚ್‌ 20 ಮುಂಚಿತವಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಎಚ್ಚರಿಕೆ ನೀಡಿದ್ದು, ಮಾರ್ಚ್ 20ರೊಳಗೆ ಅಳವಡಿಸದಸಿದ್ದರೆ ಮತ್ತೊಂದು ಸಮರಕ್ಕೆ ಸಿದ್ದತೆ ನಡೆಸಿದೆ. ಮಾ.20 ರಂದು ಬೃಹತ್ ರ್ಯಾಲಿ ನಡೆಸಲು ಕರವೇ ಕಾರ್ಯಕರ್ತರು ಸಜ್ಜಾಗಿದ್ದು, ರಾಜ್ಯಾದ್ಯಂತ ಬೃಹತ್ ರ್ಯಾಲಿ ನಡೆಸಲು ಕನ್ನಡದ ಕಲಿಗಳು ಸಿದ್ದರಾಗಿದ್ದಾರೆ. ಕೊನೆ ಅವಕಾಶದಲ್ಲಿ ಬದಲಾಗದೇ ಹೋದ್ರೆ ಬಿಸಿ ಮುಟ್ಟಿಸಲು ಮತ್ತೊಮ್ಮೆ ಕರವೇ ತಯಾರಿ ನಡೆಸಿದೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪರ ಅಖಾಡಕ್ಕಿಳಿದ ಮಾಜಿ ಸಿಎಂ ಕುಮಾರಸ್ವಾಮಿ..!

 

 

 

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here