Download Our App

Follow us

Home » ಸಿನಿಮಾ » ಮೆಸೇಜ್ ಮಾಡ್ತಾರೆ, ಮನೆಗೆ ಕರೀತಾರೆ – ಬಾಲಿವುಡ್ ನಟರ ಕರಾಳ ಮುಖ ಬಿಚ್ಚಿಟ್ಟ ಕಂಗನಾ..!

ಮೆಸೇಜ್ ಮಾಡ್ತಾರೆ, ಮನೆಗೆ ಕರೀತಾರೆ – ಬಾಲಿವುಡ್ ನಟರ ಕರಾಳ ಮುಖ ಬಿಚ್ಚಿಟ್ಟ ಕಂಗನಾ..!

ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಬಾಲಿವುಡ್​ ನಟರ ಕರಾಳ ಮುಖ ಬಿಚ್ಚಿಟ್ಟಿದ್ದಾರೆ. ಹೌದು, ಬಾಲಿವುಡ್ ಹೀರೋಗಳೇ ನಟಿಯರಿಗೆ ಕಿರುಕುಳ ನೀಡುತ್ತಾರೆ ಎಂದು ನಟಿ ಕಂಗನಾ ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಚಾನಲ್​ನ ಸಂದರ್ಶನದಲ್ಲಿ ಮಾತನಾಡಿದ ನಟಿ ಕಂಗನಾ, ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳಾ ಕಲಾವಿದರ ಸ್ಥಿತಿ-ಗತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಟಿಯರ ಕೆಲ ಕಷ್ಟಗಳಿಗೆ ಕೆಲ ನಟರೇ ಹೊಣೆಗಾರರು ಎಂದು ಕಂಗನಾ ಹೇಳಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟರು, ಮಹಿಳಾ ಕಲಾವಿದರ ಎಷ್ಟು ಶೋಷಣೆ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಮೆಸೇಜ್ ಮಾಡ್ತಾರೆ, ಊಟಕ್ಕೆ ಕರೀತಾರೆ, ಇನ್ನೂ ಕೆಲವರು ಮನೆಗೆ ಕರೀತಾರೆ. ಬರದಿದ್ರೆ ಬೆದರಿಕೆ ಕೂಡ ಹಾಕ್ತಾರೆ ಎಂದು ಕಂಗನಾ ಆರೋಪಿಸಿದ್ದಾರೆ. ಪ್ರೀತಿ, ಮದುವೆ ಅದೆಲ್ಲಾ ಮುಂದಿನ ಮಾತಾಗಿರುತ್ತದೆ. ಆದ್ರೆ ನಟರ ಹೆಚ್ಚು ಶೋಷಣೆ ಮಾಡುವವರು ಎಂದು ಕಂಗನಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

‘ಸರೋಜ್ ಖಾನ್ ಒಮ್ಮೆ ಲೈಂಗಿಕ ಕಿರಕುಳದ ಬಗ್ಗೆ ಮಾತನಾಡಿದ್ದರು. ಅತ್ಯಾಚಾರ ಮಾಡುತ್ತಾರೆ ಜೊತೆಗೆ ಊಟವನ್ನೂ ನೀಡುತ್ತಾರೆ ಎಂದಿದ್ದರು. ಸದ್ಯ ನಮ್ಮ ಹೆಣ್ಣು ಮಕ್ಕಳ ಸ್ಥಿತಿ ಕೂಡ ಚಿತ್ರರಂಗದಲ್ಲಿ ಈ ರೀತಿಯಲ್ಲಿದೆ’ ಎಂದು ಕಂಗನಾ ಹೇಳಿದ್ದಾರೆ.

ಇನ್ನು, ನನಗೆ ಖಾನ್ ಗಳ ಜೊತೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ಹೇಳಿದ್ರೆ, ಕೆಲವರು ನನ್ನನ್ನು ಸೈಕೋ ಮತ್ತು ಕಪಟಿ ಎಂದೆಲ್ಲಾ ಕರೆದಿದ್ದಾರೆ ಎಂದು ನಟಿ ಕಂಗನಾ ತಮಗಾದ ಅವಮಾನದ ಬಗ್ಗೆ ಕೂಡ ಮಾತನಾಡಿದ್ದಾರೆ. ಸದ್ಯ ಅವರ ಹೇಳಿಕೆಗೆ ಅನೇಕರು ಅಚ್ಚರಿ ಹೊರಹಾಕಿದ್ದಾರೆ.

ಈಗಾಗಲೇ ಮಲಯಾಳಂ ಚಿತ್ರರಂಗದ ಮೀಟು ವಿಚಾರ ಚರ್ಚೆಯಲ್ಲಿದ್ದು, ಈ ವಿಚಾರ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಕೇಶ್, ಸಿದ್ದಿಖಿ, ಜಯಸೂರ್ಯ, ನಿರ್ದೇಶಕ ರಂಜಿತ್ ಸೇರಿ ಅನೇಕ ಚಿತ್ರರಂಗ ಕಲಾವಿದರು ಹಾಗೂ ತಂತ್ರಜ್ಞರ ವಿರುದ್ಧ ಕೇಸ್ ಕೂಡ ದಾಖಲಾಗಿದೆ.

ಇದನ್ನೂ ಓದಿ : ರಾಜಾತಿಥ್ಯದ ಪರಪ್ಪನ ಅಗ್ರಹಾರದ ಮೇಲೆ ಪೊಲೀಸರ ದಾಳಿ – ವಿಲ್ಸನ್ ಗಾರ್ಡನ್ ನಾಗನ ಫೋನ್ ಸೇರಿ 15 ಮೊಬೈಲ್ ಸೀಜ್..

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here