Download Our App

Follow us

Home » ರಾಜಕೀಯ » ಹುಬ್ಬಳ್ಳಿಯ ನೇಹಾ ಹ*ತ್ಯೆ ತನಿಖೆಯನ್ನು ಸಿಬಿಐಗೆ ವಹಿಸಿ – ಜೆ.ಪಿ. ನಡ್ಡಾ..!

ಹುಬ್ಬಳ್ಳಿಯ ನೇಹಾ ಹ*ತ್ಯೆ ತನಿಖೆಯನ್ನು ಸಿಬಿಐಗೆ ವಹಿಸಿ – ಜೆ.ಪಿ. ನಡ್ಡಾ..!

ಹುಬ್ಬಳ್ಳಿ : ನೇಹಾ ಹಿರೇಮಠ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣ ಸಂಬಂಧ ಒಂದೆಡೆ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಕೂಡ ಆರಂಭವಾಗಿದೆ. ಇದರ ನಡುವೆ ನಿನ್ನೆ ಹುಬ್ಬಳ್ಳಿಗೆ ಪ್ರಚಾರಕ್ಕೆಂದು ತೆರಳಿದ್ದ ವೇಳೆ ಜೆ.ಪಿ ನಡ್ಡಾ ಅವರು ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿ, ನಿಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುತ್ತೇವೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಕುಟುಂಬದವರಿಗೆ ಭರವಸೆ ನೀಡಿದ್ದಾರೆ.

ರವಿವಾರ ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೃದಯವಿದ್ರಾವಕ ಘಟನೆಯಾಗಿದ್ದು, ಪಕ್ಷ ಇದನ್ನು ಖಂಡಿಸುತ್ತದೆ.

ರಾಜ್ಯ ಸರ್ಕಾರ ಹಾಗೂ ಇಲ್ಲಿನ ಪೊಲೀಸರು  ಹುಬ್ಬಳ್ಳಿ ನೇಹಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಬಿಜೆಪಿ ಇದಕ್ಕೆ ಸಂಪೂರ್ಣ ಸಹಾಕರ ನೀಡಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿದ್ದಾರೆ.

ಇದನ್ನೂ ಓದಿ : ಲೋಕಸಭೆ ಪ್ರಚಾರ ಅಖಾಡ ಮತ್ತಷ್ಟು ರಂಗು – ಇಂದು ಹಾಸನ, ಚಿಕ್ಕಮಗಳೂರಲ್ಲಿ ಸಿಎಂ ಸಿದ್ದು ಮತಶಿಕಾರಿ..!

Leave a Comment

RELATED LATEST NEWS

Top Headlines

ಮೋದಿ ಮತ್ತೆ ಗೆದ್ದರೆ ತಮ್ಮ ದೇಗುಲವನ್ನು ತಾವೇ ಕಟ್ಟಿಸ್ತಾರೆ : ಸಚಿವ ಶಿವರಾಜ್​ ತಂಗಡಗಿ..!

ಕೊಪ್ಪಳ : ಮೋದಿ ಮತ್ತೆ ಗೆದ್ದರೆ ತಮ್ಮ ದೇಗುಲವನ್ನು ತಾವೇ ಕಟ್ಟಿಕೊಳ್ತಾರೆ, ರಾಮನ ಮಂದಿರ ಆಯ್ತು ಈಗ ಮೋದಿ ಮಂದಿರ ಕಟ್ತಾರೇನೋ..? ಮೋದಿಯವರ ಮಾತು ಕೇಳ್ತಾ ಇದ್ರೆ

Live Cricket

Add Your Heading Text Here