Download Our App

Follow us

Home » ಅಪರಾಧ » ಜೆಟ್​ ಲ್ಯಾಗ್​ ಪಬ್​ ಕೇಸ್​ ; ನಟ ದರ್ಶನ್​​ ಸೇರಿ ಸೆಲೆಬ್ರಿಟಿಗಳಿಗೆ ನೋಟಿಸ್​..

ಜೆಟ್​ ಲ್ಯಾಗ್​ ಪಬ್​ ಕೇಸ್​ ; ನಟ ದರ್ಶನ್​​ ಸೇರಿ ಸೆಲೆಬ್ರಿಟಿಗಳಿಗೆ ನೋಟಿಸ್​..

ಬೆಂಗಳೂರು : ಜೆಟ್​ ಲ್ಯಾಗ್​​​​​ ಪಬ್​​​ನಲ್ಲಿ ಸೆಲೆಬ್ರಿಟಿ ಪಾರ್ಟಿ ಪ್ರಕರಣ ಸಂಬಂಧ  ನಟ ದರ್ಶನ್​​​ ಸೇರಿ 10ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ  ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ.

ದರ್ಶನ್ ಹೊಸ ವರ್ಕೌಟ್ ವಿಡಿಯೋದಲ್ಲಿ 'ನನ್ನ ಪ್ರೀತಿಯ ಸೆಲೆಬ್ರಿಟಿ' ಟ್ಯಾಟೂ ಮಾಯ! ಇಷ್ಟೇನಾ ನಿಮ್ಮ ಡಿಬಾಸ್ ಪ್ರೀತಿ ಎಂದವರಿಗೆ ಅಭಿಮಾನಿಗಳು ಕೊಟ್ಟ ಟಕ್ಕರ್ ...

ಯಾರಿಗೆ ನೊಟೀಸ್ ..?  ನಟ ದರ್ಶನ್​​​​, ನಿರ್ಮಾಪಕ ರಾಕ್​​​ಲೈನ್​​ ವೆಂಕಟೇಶ್​, ಅಭಿಷೇಕ್​ ಅಂಬರೀಶ್​, ನಟ ಚಿಕ್ಕಣ್ಣ, ಡಾಲಿ ಧನಂಜಯ್​​ ಮತ್ತು ತರುಣ್​ ಸುಧೀರ್​​, ಹರಿಕೃಷ್ಣ, ನೀನಾಸಂ ಸತೀಶ್​ ಹಾಗೂ ಜೆಟ್​ ಲ್ಯಾಗ್​​​ ಪಬ್​​​​​​ ಒಡತಿ ಶಶಿರೇಖಾ ಜಗದೀಶ್​ಗೂ ನೋಟಿಸ್ ನೀಡಿದ್ದಾರೆ.

ಜೆಟ್​ ಲ್ಯಾಗ್​​​​​ ಪಬ್​ನಲ್ಲಿ ರೂಲ್ಸ್ ಬ್ರೇಕ್​ ಮಾಡಿ ಬೆಳಗಿನ ಜಾವದವರೆಗೂ ಪಾರ್ಟಿ ನಡೆದಿತ್ತು. ದರ್ಶನ್​​ ಸೇರಿ 30ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪೊಲೀಸರು ಪಬ್​​​ ಒಳಗಿನ CCTV ದೃಶ್ಯ ಪರಿಶೀಲಿಸಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ಇನ್ನೆರಡು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್​​​ ಸೇರಿ 10ಕ್ಕೂ ಹೆಚ್ಚು ಮಂದಿಗೆ ನೋಟಿಸ್​ ನೀಡಲಾಗಿದೆ ಎಂದು ಬಿಟಿವಿಗೆ ಉತ್ತರ ವಿಭಾಗ DCP ಸೈದುಲು ಅಡಾವತ್​​​​​ ಮಾಹಿತಿ ತಿಳಿಸಿದ್ದಾರೆ.

ನಟ ದರ್ಶನ್​​​ ಸದ್ಯಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಯಾಕೆಂದರೆ ಸಿನಿಮಾ ಪ್ರಮೋಷನ್​ಗಾಗಿ ದರ್ಶನ್​​​ ದುಬೈಗೆ ತೆರಳಿದ್ದಾರೆ. ದುಬೈನಿಂದ ಬಂದ ನಂತರ ವಿಚಾರಣೆಗೆ ಹಾಜರಾಗುವ  ಸಾಧ್ಯತೆಗಳಿವೆ. ದರ್ಶನ್​​ ಸೆಲೆಬ್ರಿಟಿ ಪಾರ್ಟಿ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೆಲೆಬ್ರಿಟಿಗಳ ಪಾರ್ಟಿಗಾಗಿ ಜೆಟ್​ಲ್ಯಾಗ್​​​ ಪಬ್​ ಇಡೀ ರಾತ್ರಿ ಓಪನ್​ ಆಗಿತ್ತು.

ಇದನ್ನೂ ಓದಿ : ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾ*ವು..

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here