ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರದ ನಾಗರಭಾವಿ ಬಳಿ ನಡೆದಿದೆ. ಅಮಿತ್ ಚಾಂಗ್ (32) ಮೃತ ಕಾರ್ಮಿಕ.
ಅಮಿತ್ ಚಾಂಗ್ ನಿನ್ನೆ ರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿ, ಬಳಿಕ ಕಟ್ಟಡದ ಮೇಲೆ ಮಲಗಿದ್ದ. ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಎದ್ದಾಗ ಆಯಾತಪ್ಪಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ. ಮೃತಪಟ್ಟವನ ಶವ ಕಂಡ ಬೀದಿನಾಯಿಗಳು ಸುತ್ತುವರೆದಿದ್ದವು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : MLA ಕೆ.ವೈ.ನಂಜೇಗೌಡ ಮನೆ,ಕಚೇರಿಗಳ ಮೇಲೆ ED ರೇಡ್..
Post Views: 1,193