ಮಂಡ್ಯ : ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಆ. 28ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಉಭಯ ಪಕ್ಷಗಳ ನಾಯಕರಾದ ಕಾಂಗ್ರೆಸ್ಸಿನ ಚೆಲುವರಾಯ ಸ್ವಾಮಿ ಹಾಗೂ ಜೆಡಿಎಸ್‌ನ ಎಚ್ಡಿ ಕುಮಾರಸ್ವಾಮಿಯವರ ಫೈಟ್ನಲ್ಲಿ ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ನಾಗೇಶ್ ಅವರು ಆಯ್ಕೆಯಾಗಿದ್ದಾರೆ.
ಚಲುವರಾಯಸ್ವಾಮಿಗೆ ಕುಮಾರಸ್ವಾಮಿ ಟಕ್ಕರ್ ಕೊಟ್ಟಿದ್ದು, ಮಂಡ್ಯ MLA ರವಿಕುಮಾರ್ಗೌಡ ನೇತೃತ್ವದಲ್ಲಿ ತಂತ್ರಗಾರಿಕೆ ನಡೆದಿತ್ತು. ಜೆಡಿಎಸ್ ಸಂಖ್ಯಾಬಲ ಹೆಚ್ಚಿದ್ದರೂ ಕಾಂಗ್ರೆಸ್ ಗದ್ದುಗೆ ಹಿಡಿಯಲು ರಣತಂತ್ರ ನಡೆಸಿದ್ದರು. ಆದರೆ ಆಪರೇಷನ್ಗೆ ಸಡ್ಡು ಹೊಡೆದು ದಳಪತಿ ಜೆಡಿಎಸ್ ಗೆಲ್ಲಿಸಿದ್ದಾರೆ.
ಜೆಡಿಎಸ್‌ನ ನಾಗೇಶ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅರುಣ್‌ಕುಮಾರ್ ಆಯ್ಕೆಯಾಗಿದ್ದಾರೆ. ಮಂಡ್ಯ ನಗರಸಭೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಸಂಸದ, ಶಾಸಕರ ಮತ ಸೇರಿ ಒಟ್ಟು 37 ಮತಗಳಿದ್ದವು. ಜೆಡಿಎಸ್ಗೆ 19, ಕಾಂಗ್ರೆಸ್ಗೆ 18 ಮತಗಳು ಬಿದ್ದಿವೆ. ಒಂದೇ ಒಂದು ಮತದಲ್ಲಿ ಜೆಡಿಎಸ್ ಅಧಿಕಾರ ಉಳಿಸಿಕೊಂಡಿದೆ. ಮೂವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪರ ವಾಲಿದ್ದರು. ಜೆಡಿಎಸ್ ನಾಯಕರು ಕಾಂಗ್ರೆಸ್ನಿಂದ ಒಬ್ಬರನ್ನು ಸೆಳೆದಿತ್ತು, ಹಾಗಾಗಿ ಎಲೆಕ್ಷನ್ಗೂ ಮುನ್ನ ಬೃಹತ್ ಹೈಡ್ರಾಮ ನಡೆದಿತ್ತು.
ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲ್ನಲ್ಲಿ ನೂತನ DIG ರೇಡ್ – ಜೈಲಿನ ಅಧಿಕಾರಿ, ಸಿಬ್ಬಂದಿಗೆ ಖಡಕ್ ವಾರ್ನಿಂಗ್ ಕೊಟ್ಟ ಡಿಐಜಿ ದಿವ್ಯಾ..!