Download Our App

Follow us

Home » ರಾಜಕೀಯ » ಮಂಡ್ಯ ನಗರಸಭೆಯಲ್ಲಿ ರೋಚಕ ಗೆಲುವು ಸಾಧಿಸಿದ ಜೆಡಿಎಸ್ – ಚೆಲುವರಾಯಸ್ವಾಮಿಗೆ ಠಕ್ಕರ್ ಕೊಟ್ಟ HDK..!

ಮಂಡ್ಯ ನಗರಸಭೆಯಲ್ಲಿ ರೋಚಕ ಗೆಲುವು ಸಾಧಿಸಿದ ಜೆಡಿಎಸ್ – ಚೆಲುವರಾಯಸ್ವಾಮಿಗೆ ಠಕ್ಕರ್ ಕೊಟ್ಟ HDK..!

ಮಂಡ್ಯ : ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಆ. 28ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಉಭಯ ಪಕ್ಷಗಳ ನಾಯಕರಾದ ಕಾಂಗ್ರೆಸ್ಸಿನ ಚೆಲುವರಾಯ ಸ್ವಾಮಿ ಹಾಗೂ ಜೆಡಿಎಸ್​​ನ ಎಚ್​ಡಿ ಕುಮಾರಸ್ವಾಮಿಯವರ ಫೈಟ್​ನಲ್ಲಿ ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ನಾಗೇಶ್ ಅವರು ಆಯ್ಕೆಯಾಗಿದ್ದಾರೆ.

ಚಲುವರಾಯಸ್ವಾಮಿ‌ಗೆ ಕುಮಾರಸ್ವಾಮಿ ಟಕ್ಕರ್ ಕೊಟ್ಟಿದ್ದು, ಮಂಡ್ಯ MLA ರವಿಕುಮಾರ್​ಗೌಡ ನೇತೃತ್ವದಲ್ಲಿ ತಂತ್ರಗಾರಿಕೆ ನಡೆದಿತ್ತು. ಜೆಡಿಎಸ್​ ಸಂಖ್ಯಾಬಲ ಹೆಚ್ಚಿದ್ದರೂ ಕಾಂಗ್ರೆಸ್ ಗದ್ದುಗೆ ಹಿಡಿಯಲು ರಣತಂತ್ರ ನಡೆಸಿದ್ದರು. ಆದರೆ ಆಪರೇಷನ್​​ಗೆ ಸಡ್ಡು ಹೊಡೆದು ದಳಪತಿ ಜೆಡಿಎಸ್​ ಗೆಲ್ಲಿಸಿದ್ದಾರೆ.

ಜೆಡಿಎಸ್‌‌ನ ನಾಗೇಶ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅರುಣ್‌ಕುಮಾರ್ ಆಯ್ಕೆಯಾಗಿದ್ದಾರೆ. ಮಂಡ್ಯ ನಗರಸಭೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಸಂಸದ, ಶಾಸಕರ ಮತ ಸೇರಿ ಒಟ್ಟು 37 ಮತಗಳಿದ್ದವು. ಜೆಡಿಎಸ್​ಗೆ 19, ಕಾಂಗ್ರೆಸ್​ಗೆ 18 ಮತಗಳು ಬಿದ್ದಿವೆ. ಒಂದೇ ಒಂದು ಮತದಲ್ಲಿ ಜೆಡಿಎಸ್ ಅಧಿಕಾರ ಉಳಿಸಿಕೊಂಡಿದೆ. ಮೂವರು ಜೆಡಿಎಸ್ ಸದಸ್ಯರು ಕಾಂಗ್ರೆಸ್​ ಪರ ವಾಲಿದ್ದರು. ಜೆಡಿಎಸ್ ನಾಯಕರು ಕಾಂಗ್ರೆಸ್​ನಿಂದ ಒಬ್ಬರನ್ನು ಸೆಳೆದಿತ್ತು, ಹಾಗಾಗಿ ಎಲೆಕ್ಷನ್​ಗೂ ಮುನ್ನ ಬೃಹತ್​ ಹೈಡ್ರಾಮ ನಡೆದಿತ್ತು.

ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲ್​​ನಲ್ಲಿ ನೂತನ DIG ರೇಡ್​ – ಜೈಲಿನ ಅಧಿಕಾರಿ, ಸಿಬ್ಬಂದಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಡಿಐಜಿ ದಿವ್ಯಾ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here