ಬೆಂಗಳೂರು : ಕಾರಾಗೃಹ ಇಲಾಖೆಯ ನೂತನ ಡಿಐಜಿಯಾಗಿ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ದಿವ್ಯಾ ಅವರು ಪರಪ್ಪನ ಅಗ್ರಹಾರ ಜೈಲ್ಗೆ ದಾಳಿ ಮಾಡಿದ್ದಾರೆ. ನಟ ದರ್ಶನ್ ಹಾಗೂ ಕೆಲ ಆರೋಪಿಗಳಿಗೆ ರಾಜಾತಿಥ್ಯ ನೀಡಿದ್ದ ಹಿನ್ನೆಲೆ ಕಾರಾಗೃಹ ಇಲಾಖೆ ಡಿಐಜಿ ದಿವ್ಯಾ ಮತ್ತು ಟೀಂ ರೇಡ್ ಮಾಡಿದ್ದು, ಈ ವೇಳೆ ಜೈಲಿನ ಅಧಿಕಾರಿ, ಸಿಬ್ಬಂದಿಗೆ ಮತ್ತೆ ಇಂಥಹ ಕೇಸ್ ಮರುಕಳಿಸದಂತೆ ಡಿಐಜಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ರೌಡಿಶೀಟರ್‌ಗಳ ಬ್ಯಾರಕ್ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಿ, ನೂತನ ಡಿಐಜಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗೆಯೇ ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಮಾನಿಟರ್ ಮಾಡಲು ಸೂಚನೆ ನೀಡಿದ್ದಾರೆ.
ವಿಲ್ಸನ್ ಗಾರ್ಡನ್ ನಾಗ, ಬೇಕರಿ ರಘುಗೂ ವಾರ್ನ್ DIG ಮಾಡಿದ್ದು, ಹೈಫೈ ಲೈಫ್ ಕಡೆ ಇನ್ನೊಮ್ಮೆ ಗಮನ ಹರಿಸಿದ್ರೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಡಿಐಜಿ ದಿವ್ಯಾ ಅವರು ಎಲ್ಲಾ ಬ್ಯಾರಕ್ಗಳನ್ನೂ ಪರಿಶೀಲನೆ ಮಾಡಿ, ರಾಜಾತಿಥ್ಯ ಕಂಡು ಬಂದ್ರೆ ಕ್ರಮ ಕೈಗೊಳ್ಳೋದಾಗಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಕ್ರಿಕೆಟ್ ಜಗತ್ತಿಗೆ ಜಯ್ ಶಾ ಸಾರಥಿ – ಐಸಿಸಿ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ..!