ಬೆಂಗಳೂರು : ನಿರ್ಮಾಪಕ ಸೌಂದರ್ಯ ಜಗದೀಶ್ ಸೂಸೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಜಗದೀಶ್ ಪತ್ನಿ ಶಶಿರೇಖಾ ಸ್ಫೋಟಕ ಮಾಹಿತಿ ಬಾಯ್ಟಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಶಿರೇಖಾ ಅವರು, ನನ್ನ ಪತಿಗೆ ಬ್ಯುಸಿನೆಸ್ ಪಾರ್ಟನರ್ಗಳಿಂದ ಮೋಸ ಆಗಿದೆ. ನನ್ನ ಗಂಡನಿಂದ ಪಾರ್ಟನರ್ಗಳು ಖಾಲಿ ಪೇಪರ್ಗೆ ಸಹಿ ಹಾಕಿಸಿಕೊಂಡಿದ್ದಾರೆ. ನಾನು ಮನೆಯಲ್ಲಿ ಜೋಡಿಸಿಟ್ಟಿದ್ದ ಬಟ್ಟೆ ತೆಗೆದಾಗ ಚೀಟಿ ಸಿಕ್ಕಿತ್ತು ಎಂದಿದ್ದಾರೆ.
ಅದರಲ್ಲಿ ನಮ್ಮ ಮನೆಯವರು ಎಲ್ಲವನ್ನೂ ಬರೆದುಕೊಂಡಿದ್ದರು. ಕೂಡಲೇ ಪೊಲೀಸರಿಗೆ ದೂರು ನೀಡಿ ಡೆತ್ನೋಟ್ ನೀಡಿದ್ದೇನೆ. ಇನ್ನು ನನಗೂ, ನನ್ನ ಮಗನ ಜೀವಕ್ಕೂ ಬೆದರಿಕೆ ಇದೆ. ನಮ್ಮನ್ನು ಏನ್ ಮಾಡ್ತಾರೋ ಅನ್ನೋ ಭಯ ಇದೆ ಎಂದು ಶಶಿರೇಖಾ ಎಲ್ಲವನ್ನೂ ಎಳೆ-ಎಳೆಯಾಗಿ ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣಗೆ ಮತ್ತೊಂದು ಬಿಗ್ ಶಾಕ್ : ಶೋಕಾಸ್ ನೋಟಿಸ್ ನೀಡಿದ ವಿದೇಶಾಂಗ ಇಲಾಖೆ..!
Post Views: 92