ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರು ರಾತ್ರಿ ವೇಳೆ ಮಾರಕಾಸ್ತ್ರ ಹಿಡಿದು ಕಾರನ್ನು ಅಡ್ಡ ಹಾಕುವುದು, ದಾರಿ ಹೋಕರ ಮೇಲೆ ದೌರ್ಜನ್ಯ ನಡೆಸುವುದು, ಬೆದರಿಸಿ ಕ್ರೌರ್ಯ ಮೆರೆಯುವುದು ಸದ್ಯ ಸಾಮಾನ್ಯ ಎಂಬಂತಾಗಿದೆ. ಅದರಂತೆ ಇದೀಗ ರಾಜಧಾನಿಯಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಜೆಜೆ ನಗರದಲ್ಲಿ ಹೇಳೋರು.. ಕೇಳೋರೇ ಇಲ್ಲದಂತಾಗಿದೆ. ಇನ್ಸ್ಪೆಕ್ಟರ್ ಕೆಂಪೇಗೌಡ ಬಂದ್ಮೇಲೆ JJ ನಗರ ಕಂಟ್ರೋಲ್ ತಪ್ಪಿದ್ದು, ರೌಡಿಸಂ ಸಿನಿಮಾಗಳ ಎಲ್ಲಾ ಸೀನ್ಗಳು ಇಲ್ಲೇ ನಡೀತಿವೆ. JJ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುಂಡರ ಅಟ್ಟಹಾಸ ಮೆರದಿರುವುದು ಮತ್ತೆ ಜನಸಾಮಾನ್ಯರಲ್ಲಿ ಭಯ ಹುಟ್ಟಿಸಿದೆ.
ಹೌದು.. JJ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುಂಡರ ಹಾವಳಿ ಜೋರಾಗಿದ್ದು, ಲಾಂಗು ಮುಚ್ಚು ಹಿಡಿದು ಕಿಡಿಕೇಡಿ ಕೃತ್ಯ ಎಸಗಿದ್ದಾರೆ. ಈ ಘಟನೆ ನಡೆದು 3 ದಿನ ಆದ್ರೂ ಪೊಲೀಸರು ಈವರೆಗೂ ಒಬ್ಬರನ್ನೂ ಅರೆಸ್ಟ್ ಮಾಡಿಲ್ಲ. ಪುಡಿ ರೌಡಿಗಳ ಪುಂಡಾಟಕ್ಕೆ ಜನರು ಹೊರಗಡೆ ಓಡಾಡಲೂ ಆಗ್ತಿಲ್ಲ. ರಸ್ತೆಯಲ್ಲಿ ನಡೆದಾಡಲೂ ಭಯ ಪಡುವಂತಾ ಸ್ಥಿತಿ ನಿರ್ಮಾಣವಾಗಿದೆ.
ಪುಂಡಾರ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಯಾಗಿದ್ದು, ಗ್ಯಾಂಗ್ ಕೈಯಲ್ಲಿ ಮಚ್ಚು ಹಿಡಿದುಕೊಂಡು ಗಲ್ಲಿ ಗಲ್ಲಿ ಸುತ್ತಾಡಿ ಅವಾಚ್ಯ ಶಬ್ಧಗಳಿಂದ ಜನರನ್ನ ನಿಂದಿನೆ ಮಾಡಿದ್ದಾರೆ. ಏರಿಯಾದ ಜನರನ್ನ ಬೆದರಿಸಿಕೊಂಡು ಓಡಾಟ ಮಾಡಿ ಜನರಿಗೆ ಭಯ ಉಂಟು ಮಾಡುವ ರೀತಿ ವರ್ತನೆ ಮಾಡಿದ್ದಾರೆ.
ಈ ಬಗ್ಗೆ ಹಲವು ಬಾರಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಜೆಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಈವರೆಗೆ ಪುಂಡರ ಮೇಲೆ ಕ್ರಮ ಆಗಿಲ್ಲ. ಇಷ್ಟೆಲ್ಲ ನಡೀತಿದ್ರು JJ ನಗರ ಇನ್ಸ್ಪೆಕ್ಟರ್ ಕೆಂಪೇಗೌಡ ಏನ್ಮಾಡ್ತಿದ್ದಾರೆ? ಪುಂಡರ ವಿಡಿಯೋ ವೈರಲ್ ಆದ್ರೂ ಇನ್ಸ್ಪೆಕ್ಟರ್ ಸೈಲೆಂಟ್ ಆಗಿದ್ದಾರೆ.
ಹಾಗಾಗಿ, ಘಟನೆ ನಡೆದು 3 ದಿನ ಆದ್ರೂ ಒಬ್ಬರನ್ನೂ ಅರೆಸ್ಟ್ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ನಗರ ಕಮಿಷನರ್ ದಯಾನಂದ್ ಆವ್ರೇ ಇನ್ಸ್ಪೆಕ್ಟರ್ ಕೆಂಪೇಗೌಡ ಸಸ್ಪೆಂಡ್ ಮಾಡಿ ಎಂಬ ಕೂಗು ಕೇಳಿ ಬರ್ತಿದೆ.
ಇದನ್ನೂ ಓದಿ : ಹೊಸ ನಿಯಮ ಜಾರಿಗೆ ತಂದ ಓಯೋ.. ಇನ್ಮುಂದೆ ಅವಿವಾಹಿತ ಜೋಡಿಗೆ ಹೋಟೆಲ್ ರೂಮ್ ಇಲ್ಲ..!