Download Our App

Follow us

Home » ಅಪರಾಧ » ಬೆಂಗಳೂರು : ಬೃಹತ್​​ ಕಾಂಟ್ರಾಕ್ಟರ್​​​​ ಮೇಲೆ ಐಟಿ ರೇಡ್..!

ಬೆಂಗಳೂರು : ಬೃಹತ್​​ ಕಾಂಟ್ರಾಕ್ಟರ್​​​​ ಮೇಲೆ ಐಟಿ ರೇಡ್..!

ಬೆಂಗಳೂರು : ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಬೃಹತ್​​ ಕಾಂಟ್ರಾಕ್ಟರ್​​​​ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶ್ರೀನಿವಾಸ್​ ಕನ್ಸ್​ಸ್ಟ್ರಕ್ಷನ್ಸ್​, ಶ್ರೀನಿವಾಸ್​ ಮಿನರಲ್ಸ್ ಕಂಪನಿ​ ಮೇಲೆ ಐಟಿ ರೇಡ್​ ಮಾಡಿದೆ.

ಪಿಚ್ಚೇಶ್ವರರಾವ್​​​ ಶ್ರೀನಿವಾಸ್​ ಕನ್ಸ್​ಸ್ಟ್ರಕ್ಷನ್​ನ​​ ಮಾಲೀಕನಾಗಿದ್ದು, ಪಿಚ್ಚೇಶ್ವರರಾವ್​​​ ಅಳಿಯ ವಂಶಿ ಕೂಡ ಕಂಪನಿ ಪಾಲುದಾರನಾಗಿದ್ದಾನೆ. ವಂಶಿ ನೀರಾವರಿ ಇಲಾಖೆ, ರಸ್ತೆ ನಿರ್ಮಾಣ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾಂಟ್ರಾಕ್ಟರ್​ ಆಗಿದ್ದು, ಈ ಕಂಪನಿ 2500-3000 ಕೋಟಿ ರೂಪಾಯಿಗಳ ಗುತ್ತಿಗೆ ಕೆಲಸ ಮಾಡಿದೆ.

ಈ ಕಂಪನಿ ಮಂಡ್ಯದಲ್ಲಿ 400 ಕೋಟಿ ರೂಪಾಯಿ ಕಾಮಗಾರಿ ಟೆಂಡರ್​ ಪಡೆದಿತ್ತು, ಶ್ರೀನಿವಾಸ ಕನ್​ಸ್ಟ್ರಕ್ಷನ್​​ ಕಂಪನಿ ವಿರುದ್ಧ ನೂರಾರು ಆರೋಪ ಕೇಳಿಬಂದಿದ್ದು, ಬೆಂಗಳೂರು, ಬಳ್ಳಾರಿ ಸೇರಿದಂತೆ ಸುಮಾರು 10 ಕಡೆ 80ಕ್ಕೂ ಹೆಚ್ಚು ಅಧಿಕಾರಿಗಳಿಂದ ರೇಡ್​ ಆಗಿದೆ.

ಬೆಂಗಳೂರಿನ ಜಯನಗರದಲ್ಲಿರುವ ಉದ್ಯಮಿ ವಂಶಿ ಮನೆಯಲ್ಲೂ ಐಟಿ ತಪಾಸಣೆ ಮಾಡಿದೆ. ಇದೀಗ ಐಟಿ ಅಧಿಕಾರಿಗಳು ಬಳ್ಳಾರಿಯಲ್ಲೂ ತಪಾಸಣೆ ಮಾಡುತ್ತಿದ್ದು, ರಸ್ತೆ, ಕಾಲುವೆ ಸೇರಿದಂತೆ ವಂಶಿ ವಿವಿಧ ಬೃಹತ್ ಕಾಮಗಾರಿಗಳ ಕಾಂಟ್ರಾಕ್ಟರ್​ ಆಗಿದ್ದಾನೆ. ಪಿಚ್ಚೇಶ್ವರ ರಾವ್ ಮನೆ ಹಾಗು ಕಚೇರಿ ಮೇಲೆ ಐಟಿ ದಾಳಿ ಮಾಡಿದೆ.

ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಶ್ರೀನಿವಾಸ ಕನ್ಸಟ್ರಕ್ಷನ್ಸ್ ಕಚೇರಿಯಲ್ಲಿ ನಾಲ್ಕು ತಂಡಗಳಿಂದ ಶೋಧ ನಡೆದಿದೆ. ಪಿಚ್ಚೇಶ್ವರರಾವ್​ನ್ನು ಐಟಿ ಅಧಿಕಾರಿಗಳು​ ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಧಾರವಾಡ : ಹೋಟೆಲ್​ನಲ್ಲಿ ಕುಕ್​ ಆಗಿದ್ದ ಯುವಕನ ಭೀಕರ ಕೊ*ಲೆ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here