ಬೆಂಗಳೂರು : ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಬೃಹತ್ ಕಾಂಟ್ರಾಕ್ಟರ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶ್ರೀನಿವಾಸ್ ಕನ್ಸ್ಸ್ಟ್ರಕ್ಷನ್ಸ್, ಶ್ರೀನಿವಾಸ್ ಮಿನರಲ್ಸ್ ಕಂಪನಿ ಮೇಲೆ ಐಟಿ ರೇಡ್ ಮಾಡಿದೆ.
ಪಿಚ್ಚೇಶ್ವರರಾವ್ ಶ್ರೀನಿವಾಸ್ ಕನ್ಸ್ಸ್ಟ್ರಕ್ಷನ್ನ ಮಾಲೀಕನಾಗಿದ್ದು, ಪಿಚ್ಚೇಶ್ವರರಾವ್ ಅಳಿಯ ವಂಶಿ ಕೂಡ ಕಂಪನಿ ಪಾಲುದಾರನಾಗಿದ್ದಾನೆ. ವಂಶಿ ನೀರಾವರಿ ಇಲಾಖೆ, ರಸ್ತೆ ನಿರ್ಮಾಣ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾಂಟ್ರಾಕ್ಟರ್ ಆಗಿದ್ದು, ಈ ಕಂಪನಿ 2500-3000 ಕೋಟಿ ರೂಪಾಯಿಗಳ ಗುತ್ತಿಗೆ ಕೆಲಸ ಮಾಡಿದೆ.
ಈ ಕಂಪನಿ ಮಂಡ್ಯದಲ್ಲಿ 400 ಕೋಟಿ ರೂಪಾಯಿ ಕಾಮಗಾರಿ ಟೆಂಡರ್ ಪಡೆದಿತ್ತು, ಶ್ರೀನಿವಾಸ ಕನ್ಸ್ಟ್ರಕ್ಷನ್ ಕಂಪನಿ ವಿರುದ್ಧ ನೂರಾರು ಆರೋಪ ಕೇಳಿಬಂದಿದ್ದು, ಬೆಂಗಳೂರು, ಬಳ್ಳಾರಿ ಸೇರಿದಂತೆ ಸುಮಾರು 10 ಕಡೆ 80ಕ್ಕೂ ಹೆಚ್ಚು ಅಧಿಕಾರಿಗಳಿಂದ ರೇಡ್ ಆಗಿದೆ.
ಬೆಂಗಳೂರಿನ ಜಯನಗರದಲ್ಲಿರುವ ಉದ್ಯಮಿ ವಂಶಿ ಮನೆಯಲ್ಲೂ ಐಟಿ ತಪಾಸಣೆ ಮಾಡಿದೆ. ಇದೀಗ ಐಟಿ ಅಧಿಕಾರಿಗಳು ಬಳ್ಳಾರಿಯಲ್ಲೂ ತಪಾಸಣೆ ಮಾಡುತ್ತಿದ್ದು, ರಸ್ತೆ, ಕಾಲುವೆ ಸೇರಿದಂತೆ ವಂಶಿ ವಿವಿಧ ಬೃಹತ್ ಕಾಮಗಾರಿಗಳ ಕಾಂಟ್ರಾಕ್ಟರ್ ಆಗಿದ್ದಾನೆ. ಪಿಚ್ಚೇಶ್ವರ ರಾವ್ ಮನೆ ಹಾಗು ಕಚೇರಿ ಮೇಲೆ ಐಟಿ ದಾಳಿ ಮಾಡಿದೆ.
ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಶ್ರೀನಿವಾಸ ಕನ್ಸಟ್ರಕ್ಷನ್ಸ್ ಕಚೇರಿಯಲ್ಲಿ ನಾಲ್ಕು ತಂಡಗಳಿಂದ ಶೋಧ ನಡೆದಿದೆ. ಪಿಚ್ಚೇಶ್ವರರಾವ್ನ್ನು ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಧಾರವಾಡ : ಹೋಟೆಲ್ನಲ್ಲಿ ಕುಕ್ ಆಗಿದ್ದ ಯುವಕನ ಭೀಕರ ಕೊ*ಲೆ..!