ಧಾರವಾಡ : ಕೋತಿಯೊಂದು ಜಿಮ್‌ಗೆ ನುಗ್ಗಿದ ಘಟನೆ ಧಾರವಾಡದ ಸೈದಾಪುರದ ಕಿಂಗ್‌ಡಮ್ ಜಿಮ್ನಲ್ಲಿ ನಡೆದಿದೆ. ಕೋತಿ ಜಿಮ್‌ಗೆ ಬಂದ ಪರಿಣಾಮ ಯುವಕರು ಹೌಹಾರಿ ಹೊರ ಬಂದಿದ್ದಾರೆ.
ಮೊದಲ ಮಹಡಿಯಲ್ಲಿರುವ ಜಿಮ್‌ಗೆ ನೇರವಾಗಿ ಒಂಟಿ ಕೋತಿ ಒಳಗೆ ಬಂದಿದೆ. ಕೋತಿ ಬರುತ್ತಿದ್ದಂತೆಯೇ ಹೌಹಾರಿದ ಯುವಕರು, ಹೊರಗೆ ಓಡಿಸಲು ಶತಪ್ರಯತ್ನ ಮಾಡಿದ್ದಾರೆ. ಆದರೆ, ಆ ಯುವಕರ ಮೇಲೆಯೇ ಕೋತಿ ಎಗರಿ ಹೋಗಿದ್ದರಿಂದ ಯುವಕರು ಜಿಮ್ ಬಿಟ್ಟು ಹೊರಗಡೆ ಓಡಿ ಹೋಗಿದ್ದಾರೆ. ಕೋತಿಯ ಈ ಚೆಲ್ಲಾಟ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ‘ನೀವು ಈ ಆಟಕ್ಕೆ ಫಿಟ್ ಇಲ್ಲ’ – ಮಾತಿನ ಮೂಲಕವೇ ಚೈತ್ರಾಗೆ ಚಾಟಿ ಬೀಸಿದ ಸುದೀಪ್..!
Post Views: 151