Download Our App

Follow us

Home » ಅಪರಾಧ » ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ – BBMP ಕಂದಾಯ ಅಧಿಕಾರಿ ಬಸವರಾಜ್​ ಮಗ್ಗಿ ಮನೆ ಮೇಲೂ ಲೋಕಾ ದಾಳಿ​..!

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ – BBMP ಕಂದಾಯ ಅಧಿಕಾರಿ ಬಸವರಾಜ್​ ಮಗ್ಗಿ ಮನೆ ಮೇಲೂ ಲೋಕಾ ದಾಳಿ​..!

ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ರಾಜ್ಯದ 11 ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್ ನೀಡಿದ್ದು, 9 ಜಿಲ್ಲೆಗಳ 56 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ​​ ದಾಳಿಯಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗದ ಎಸ್‌ಪಿಗಳೂ ಸೇರಿದಂತೆ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಶೋಧ ಕಾರ್ಯಾಚರಣೆ ಆರಂಭಸಿದ್ದಾರೆ.

ಇನ್ನು, ಬೆಂಗಳೂರಿನ ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ್​ ಮಗ್ಗಿ ಅವರ ಮೇಲೂ ಲೋಕಾಯುಕ್ತ ದಾಳಿ ನಡೆಸಿದೆ. ಬಸವರಾಜ್ ಮಗ್ಗಿ ಮಹಾದೇವಪುರ ವಲಯದ ಕಂದಾಯ ವಿಭಾಗದ ಸಹಾಯಕ‌ ಆಯುಕ್ತರಾಗಿದ್ದು, ಅಪಾರ ಪ್ರಮಾಣದ ಬೇನಾಮಿ‌ ಆಸ್ತಿ ಸಂಪಾದನೆ ಹಿನ್ನಲೆಯಲ್ಲಿ ಬಸವರಾಜ್​ ಮನೆ ದಾಳಿ ಮಾಡಲಾಗಿದೆ. ಕುಮಾರಕೃಪ ಬಳಿಯ ಅಪಾರ್ಟ್‌ಮೆಂಟ್​ನಲ್ಲಿ ಬಸವರಾಜ್​ ಮಗ್ಗಿ ಐಷಾರಾಮಿ ಜೀವನ ನಡೆಸುತ್ತಿದ್ದರು.

ಕೆಂಗೇರಿ, ಬ್ಯಾಟರಾಯನಪುರದಲ್ಲಿ ಕೆಲಸ ಮಾಡುವಾಗ ಸಾಕಷ್ಟು ಲೂಟಿ ಮಾಡಿದ ಆರೋಪ ಕೂಡ ಬಸವರಾಜ್​ ಮಗ್ಗಿ ವಿರುದ್ದ ಕೇಳಿಬಂದಿತ್ತು. ಇನ್ನು ಮಗ್ಗಿ ಆರ್​.ಆರ್ ನಗರ ವಲಯದಲ್ಲಿ ಇತ್ತೀಚೆಗೆ ನಡೆದಿದ್ದ ಖಾತಾ ವರ್ಗಾವಣೆ ಅಕ್ರಮದ ರೂವಾರಿಯಾಗಿದ್ದರು ಎನ್ನಲಾಗಿದೆ. ಬಿ-ಖಾತಾಗಳನ್ನು ಎ-ಖಾತಾಗಳನ್ನಾಗಿ ಪರಿವರ್ತಿಸಿದ್ದ ಆರೋಪ ಕೂಡ ಬಸವರಾಜ್​ ಮಗ್ಗಿ ಮೇಲಿದ್ದು, ಈ ಹಿನ್ನೆಲೆ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಸೇವೆಯಿಂದ ಬಸವರಾಜ್​ ರನ್ನು ಅಮಾನತು ಮಾಡಲಾಗಿತ್ತು. ಬಳಿಕ ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಬಸವರಾಜ್​ ನಾಪತ್ತೆಯಾಗಿದ್ದರು. ಇದೀಗ ಲೋಕಾಯುಕ್ತ ಬಲೆಗೆ ಬಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಸವರಾಜ ಮಗ್ಗಿ ಶೋಕಿಲಾಲ ಎಂದೇ ಫೇಮಸ್ ಆಗಿದ್ದರು. ಇವರು ಕೆಲಸ ಮಾಡಿದ್ದಕ್ಕಿಂತ ವೈಭವೋಪೇತ ಜೀವನ ನಡೆಸಿದ್ದೇ ಹೆಚ್ಚು ಎನ್ನಲಾಗಿದೆ. ಕೆಲವೇ ವರ್ಷಗಳಲ್ಲಿ ಹತ್ತಾರು ಕೋಟಿ ಸಂಪಾದನೆ ಮಾಡಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿಯೂ ಹಣ ತೊಡಗಿಸಿದ್ದರು. ಪೊಲೀಸ್ ಇಲಾಖೆಯಲ್ಲಿರೋ ಸಹೋದರನ ಹೆಸರನ್ನು‌ ರಕ್ಷಣೆಗೆ ಬಳಸಿಕೊಳ್ತಿದ್ದರು. ಹಾಗೆಯೇ ಅವರಿವರನ್ನು ಹೆದರಿಸಿ ಬೆದರಿಸಿ ಹಣ ಮಾಡ್ತಿದ್ದರು. ಇದೀಗ ಬಸವರಾಜ್​ ಮಗ್ಗಿ ಐಷಾರಾಮಿ ಜೀವನದ ಶೋಕಿಗೆ ಒಳಗಾಗಿ ಯಡವಟ್ಟಾಗಿದ್ದು, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ : ED ರೇಡ್​ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೊಂದು ಬಿಗ್​ ರೇಡ್ – 11 ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​​ ಕೊಟ್ಟ ಲೋಕಾಯುಕ್ತ..

Leave a Comment

DG Ad

RELATED LATEST NEWS

Top Headlines

ಹರ್ಮನ್ ಪಡೆ ಅಬ್ಬರಕ್ಕೆ ಪಾಕ್ ಧೂಳಿಪಟ – ಏಷ್ಯಾಕಪ್‌ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ..!

ದಂಬುಲ್ಲಾ : ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ-ಪಾಕಿಸ್ತಾನ ಮಹಿಳಾ ತಂಡಗಳ ಏಷ್ಯಾಕಪ್ ಪಂದ್ಯದಲ್ಲಿ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ, ಪಾಕ್

Live Cricket

Add Your Heading Text Here