Download Our App

Follow us

Home » ಅಪರಾಧ » ED ರೇಡ್​ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೊಂದು ಬಿಗ್​ ರೇಡ್ – 11 ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​​ ಕೊಟ್ಟ ಲೋಕಾಯುಕ್ತ..!

ED ರೇಡ್​ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೊಂದು ಬಿಗ್​ ರೇಡ್ – 11 ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​​ ಕೊಟ್ಟ ಲೋಕಾಯುಕ್ತ..!

ಬೆಂಗಳೂರು : ED ರೇಡ್​ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೊಂದು ಬಿಗ್​ ರೇಡ್ ನಡೆದಿದ್ದು, ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 56 ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ. ​​

11 ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗಳ ಮನೆಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಬಿಗ್​ ಶಾಕ್​​ ಕೊಟ್ಟಿದ್ದು, ರಾಜ್ಯದ 9 ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಲೋಕಾಯುಕ್ತದ ಪೊಲೀಸ್‌ ವಿಭಾಗದ ಎಸ್‌ಪಿಗಳೂ ಸೇರಿದಂತೆ 100 ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾವ ಅಧಿಕಾರಿಗಳು, ಎಲ್ಲೆಲ್ಲಿ ರೇಡ್​ ನಡೆದಿದೆ ಗೊತ್ತಾ?

  • ಬಸವರಾಜ್ ಮಾಗಿ- BBMP ಕಂದಾಯ ಅಧಿಕಾರಿ, ಕೆಂಗೇರಿ, ಕಲಬರ್ಗಿ
  • ರವೀಂದ್ರಪ್ಪ- ನಿವೃತ್ತ ಚೀಫ್ ಇಂಜಿನಿಯರ್, ಮೈನರ್ ಇರಿಗೇಷನ್, ಚಿತ್ರದುರ್ಗ
  • ಶಿವರಾಜ್ – ಎಕ್ಸಿಕ್ಯುಟಿವ್ ಇಂಜಿನಿಯರ್, ಕುಡಿಯುವ ನೀರು-ಒಳಚರಂಡಿ ವಿಭಾಗ, ಮಂಡ್ಯ
  • ಉಮೇಶ್​- ಎಕ್ಸಿಕ್ಯುಟಿವ್ ಇಂಜಿನಿಯರ್, ದಾವಣಗೆರೆ
  • ಶಂಕರ ಗೌಡ ಪಾಟೀಲ್​​- ಪ್ರಾಜೆಕ್ಟ್ ಡೈರೆಕ್ಟರ್, ಧಾರವಾಡ
  • ಮಹಾದೇವ್ ಬನ್ನೂರು- ಅಸ್ಸಿಸ್ಟೆಂಟ್ ಇಂಜಿನಿಯರ್, ಬೆಳಗಾವಿ
  • ಮಹೇಶ್- ಸೂಪರಿಂಟೆಂಡೆಂಟ್​ ಇಂಜಿನಿಯರ್, ಮೈಸೂರು
  • ವಿಜಯಣ್ಣ- ತಹಶೀಲ್ದಾರ್, ಕೋಲಾರ
  • ಪ್ರಭಾಕರ್- ಅಸ್ಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್, ದಾವಣಗೆರೆ
  • ಜಗದೀಶ್- ಗ್ರೇಡ್ 1 ಸೆಕ್ರೆಟರಿ, ಹಾಸನ

ಈ ಎಲ್ಲ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸ್‌ ಎಫ್‌ಐಆರ್‌ ದಾಖಲಿಸಿದ್ದಾರೆ. ನ್ಯಾಯಾಲಯದಿಂದ ಶೋಧನಾ ವಾರಂಟ್‌ ಪಡೆದು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ ಅಪ್​​ಡೇಟ್ ಆಗಲಿದೆ…

ಇದನ್ನೂ ಓದಿ : ED ಸುಳಿಯಲ್ಲಿ ಸಿಲುಕಿರುವ​ ನಾಗೇಂದ್ರ, ದದ್ದಲ್​ಗೆ SIT ಮತ್ತೆ ಶಾಕ್ – ವಿಚಾರಣೆಗೆ ಬರುವಂತೆ ಮೂರನೇ ಬಾರಿ ನೋಟಿಸ್​..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here