Download Our App

Follow us

Home » ರಾಷ್ಟ್ರೀಯ » ದೇಶದ ಮೊದಲ ಅಂಡರ್ ವಾಟರ್ ಮೆಟ್ರೋಗೆ ಇಂದು ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ..!

ದೇಶದ ಮೊದಲ ಅಂಡರ್ ವಾಟರ್ ಮೆಟ್ರೋಗೆ ಇಂದು ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ..!

ಕೋಲ್ಕತ್ತ : ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಉದ್ಘಾಟನೆಗೆ ಸಜ್ಜಾಗಿದೆ. ಪಶ್ಚಿಮ ಬಂಗಾಳದ ಅತೀ ದೊಡ್ಡ ನದಿ ಹೂಗ್ಲಿ ನದಿಯ ಅಡಿಯಿಂದ ಸಾಗುವ ಈ ಮೆಟ್ರೋ ರೈಲನ್ನು ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಈ ಎರಡು ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ. ಈ ರೈಲು ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳನ್ನು ಹೊಂದಿದೆ. ಒಟ್ಟು 16.6 ಕಿಲೋಮೀಟರ್ ಉದ್ದದ ಈ ರೈಲು ಮಾರ್ಗ 4. 8 ಕಿಲೋಮೀಟರ್ ಹೂಗ್ಲಿ ನದಿಯ ಆಳದಿಂದ ಸಾಗಲಿದೆ.

ಈ ಮೆಟ್ರೋ ರೈಲು 45 ಸೆಕೆಂಡ್‌ ಹೂಗ್ಲಿ ನದಿ ನೀರಿನ ಅಡಿಯಲ್ಲಿನ ಸುರಂಗದಲ್ಲಿ ಸಾಗಲಿದೆ. ಪೂರ್ವ ಮತ್ತು ಪಶ್ಚಿಮವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಸಾರಿಗೆ ಸಂಪರ್ಕದಲ್ಲಿ ಮಹತ್ತರ ಬದಲಾವಣೆ ತರಲಿದೆ. ಇದು ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ಇದನ್ನೂ ಓದಿ : ವಾಹನಗಳಿಂದ ವಾಕಿಂಗ್​​​​ಗೆ ಅಡ್ಡಿಯಾಗುತ್ತೆ ಎಂದು ರಸ್ತೆಯನ್ನೇ ಬಂದ್ ಮಾಡಿದ ನಿವೃತ್ತ, ಹಾಲಿ IAS, IPS ಅಧಿಕಾರಿಗಳು..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here