ಬೆಂಗಳೂರು : ಈಚೆಗೆ ಪಕ್ಷದಲ್ಲಿ ಉಲ್ಬಣಗೊಂಡಿರುವ ಆಂತರಿಕ ಕಚ್ಚಾಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ದೂರು ನೀಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಟೀಂ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಬುಧವಾರ ರಾತ್ರಿ ಅಮಿತ್ ಶಾ ಅವರನ್ನು ವಿಜಯೇಂದ್ರ ಭೇಟಿಯಾಗಿದ್ದರು. ಇದೇ ವೇಳೆ, ರಾಜ್ಯದಲ್ಲಿ ಕಳೆದೊಂದು ವರ್ಷದ ಪಕ್ಷ ಸಂಘಟನೆ, ಹೋರಾಟ ಕುರಿತು ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ತಮ್ಮ ಒಂದು ವರ್ಷದ ಸಾಧನೆಯ ವರದಿ ಕೊಡುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಹಾಗೆಯೇ ಯತ್ನಾಳ್ ತಂಡದ ಎರಡನೇ ಹಂತದ ವಕ್ಫ್ ಹೋರಾಟ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.
ವರಿಷ್ಠರು ಎಚ್ಚರಿಕೆ ಕೊಟ್ಟರೂ ಪ್ರತ್ಯೇಕ ಹೋರಾಟ ಮಾಡ್ತಿದ್ದಾರೆ. ವಕ್ಫ್ ನೆಪದಲ್ಲಿ ಆಗಾಗ ಪ್ರತ್ಯೇಕ ಸಭೆಗಳನ್ನು ಮಾಡ್ತಿದ್ದಾರೆ. ಯತ್ನಾಳ್ ಟೀಂ ಪ್ರತ್ಯೇಕ ಸಭೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದೆ.
ಕೂಡಲೇ ಯತ್ನಾಳ್ ಟೀಂ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ. ಕ್ರಮ ಕೈಗೊಂಡು ಸಂದೇಶ ಕಳಿಸದೇ ಇದ್ರೆ ಕಷ್ಟವಾಗುತ್ತೆ ಎಂದು ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಅಮಿತ್ ಶಾ ಜೊತೆ ವಿಜಯೇಂದ್ರ ಚರ್ಚೆ ಮಾಡಿದ್ದಾರೆ.
ಹಾಗೆಯೇ ರಾಜ್ಯದ ಪ್ರಸಕ್ತ ಬೆಳವಣಿಗೆಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದು, ಪ್ರಿಯಾಂಕ್ ಖರ್ಗೆ ಪ್ರಕರಣದ ಬಗ್ಗೆಯೂ ಅಮಿತ್ ಶಾಗೆ ಬಿವೈವಿ ಮಾಹಿತಿ ಕೊಟ್ಟಿದ್ದಾರೆ. ಇಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ವಿಜಯೇಂದ್ರ ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ : ‘ಬಂಗಾರ ವಂಚಕಿ’ ಐಶ್ವರ್ಯ ಮನೆಯಲ್ಲಿ ಐಷಾರಾಮಿ ಕಾರು, ಕೆಜಿ ಗಟ್ಟಲೆ ಬೆಳ್ಳಿ ಪತ್ತೆ..!