Download Our App

Follow us

Home » ಅಪರಾಧ » ಕಾಲ್​​ ಗರ್ಲ್​ಗಾಗಿ ಕರೆ ಮಾಡಿ ಎಂದು ಫೇಸ್​​ಬುಕ್​ನಲ್ಲಿ ಪತ್ನಿಯ ಫೋಟೊ, ಮೊಬೈಲ್ ನಂಬರ್ ಪೋಸ್ಟ್ ಮಾಡಿದ ಕಿತಾಪತಿ ಗಂಡ..!

ಕಾಲ್​​ ಗರ್ಲ್​ಗಾಗಿ ಕರೆ ಮಾಡಿ ಎಂದು ಫೇಸ್​​ಬುಕ್​ನಲ್ಲಿ ಪತ್ನಿಯ ಫೋಟೊ, ಮೊಬೈಲ್ ನಂಬರ್ ಪೋಸ್ಟ್ ಮಾಡಿದ ಕಿತಾಪತಿ ಗಂಡ..!

ಬೆಂಗಳೂರು : ಹೆಂಡತಿ ಡಿವೋರ್ಸ್​ಗೆ ಅರ್ಜಿ ಹಾಕಿದ್ದಕ್ಕೆ ಕೋಪಗೊಂಡ ಗಂಡ ಸೋಷಿಯಲ್ ಮೀಡಿಯಾದಲ್ಲಿ ಕಾಲ್​​​ಗರ್ಲ್​​ ಅಂತ ಫೋನ್​ ನಂಬರ್, ಫೋಟೋ ಹಾಕಿ ಪೋಸ್ಟ್​ ಶೇರ್ ಮಾಡಿರುವ ಘಟನೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕರಿ ಸತ್ಯನಾರಾಯಣ ರೆಡ್ಡಿ ಎನ್ನುವ ವ್ಯಕ್ತಿಯು ಕಲಾ‌ಶಶಿ ಎಂಬ ಫೇಸ್​ಬುಕ್ ಪೇಜ್ ಕ್ರಿಯೇಟ್ ಮಾಡಿ ತನ್ನ ಹೆಂಡತಿಯ ಫೋನ್ ನಂಬರ್ ಮತ್ತು ಫೋಟೋ ಶೇರ್ ಮಾಡಿದ್ದಾನೆ. ಕಾಲ್​ಗರ್ಲ್​ ಬೇಕಾಗಿದ್ದರೆ ಕರೆ ಮಾಡಿ ಎಂದು ಫೋಸ್ಟ್​ ಶೇರ್ ಮಾಡಿದ್ದಾನೆ. ಪೋಸ್ಟ್ ಹಾಕಿದ್ದೆ ತಡ ಹೆಂಡತಿಗೆ ನಿರಂತರ ಫೋನ್​ ಕಾಲ್ಸ್​ ಬರಲು ಪ್ರಾರಂಭಿಸಿವೆ.

2019ರಲ್ಲಿ ಸತ್ಯನಾರಾಯಣ ಹಾಗೂ ಶಶಿಕಲಾ ಮದುವೆಯಾಗಿದ್ದರು. ಆದರೆ 1 ವರ್ಷದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡಲು ಪ್ರಾರಂಭಿಸಿದ್ದನು. ಇದರಿಂದ ಬೇಸತ್ತಿದ್ದ ಹೆಂಡತಿ ಡಿವೋರ್ಸ್​ಗೆ ಅರ್ಜಿ ಹಾಕಿದ್ದಳು. ಇದಕ್ಕೆ ಕೋಪಗೊಂಡು ಪತಿರಾಯ ಸೋಷಿಯಲ್ ಮೀಡಿಯಾ ಮೂಲಕ ಸೇಡು ತಿರಿಸಿಕೊಂಡಿದ್ದಾನೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಮುನಿರತ್ನಗೆ ಠಕ್ಕರ್ ಕೊಡಲು ಆರ್​​.ಆರ್​​ ನಗರಕ್ಕೆ ಡಿಕೆಶಿ ಎಂಟ್ರಿ – ಸೋದರ ಡಿ.ಕೆ.ಸುರೇಶ್​ ಗೆಲ್ಲಿಸಲು ಮೆಗಾ ಪ್ಲಾನ್..!

Leave a Comment

RELATED LATEST NEWS

Top Headlines

Live Cricket

Add Your Heading Text Here