Download Our App

Follow us

Home » ರಾಜಕೀಯ » ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಭರ್ಜರಿ ಲೀಡ್ – ಈ ದಿನ ಡಾಟ್ ಕಾಮ್ ಸ್ಪೋಟಕ ಸಮೀಕ್ಷೆ..!

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಭರ್ಜರಿ ಲೀಡ್ – ಈ ದಿನ ಡಾಟ್ ಕಾಮ್ ಸ್ಪೋಟಕ ಸಮೀಕ್ಷೆ..!

ಲೋಕಸಭಾ ಎಲೆಕ್ಷನ್​ಗೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ದೇಶದಲ್ಲಿ “ಲೋಕ” ಸಮರಕ್ಕೆ ವೇದಿಕೆ ಸಿದ್ದವಾಗಿದ್ದು, ರಾಜ್ಯದಲ್ಲಿ ರಾಜಕೀಯ ನಾಯಕರು ತಾ ಮುಂದು ನಾಮುಂದು ಎಂಬತೇ ಲೋಕಸಭಾ ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದಾರೆ.

ಈ ಹೊತ್ತಲ್ಲೇ ಇದೀಗ ಈ ಬಾರಿ ಕರ್ನಾಟಕದಲ್ಲಿ ಯಾರಿಗೆ ಜಾಸ್ತಿ ಮತ ಬೀಳಲಿದೆ ಎಂಬ ಸ್ಫೋಟಕ ಸರ್ವೆಯೊಂದು ಹೊರಬಿದ್ದಿದೆ. ಸದ್ಯ ಹೊರಬಿದ್ದಿರುವ ಈ ಸರ್ವೆ ರಿಪೋರ್ಟ್ ಬಿಜೆಪಿ-ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ. ಈ ಸರ್ವೆಯ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ಸೇ ಮೆಗಾ ಕಿಂಗ್ ಎಂದು ಹೇಳಿದೆ.

ಈ ದಿನ ಡಾಟ್ ಕಾಮ್ ಬಿಡುಗಡೆ ಮಾಡಿದ ಸರ್ವೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ 17 ಸೀಟ್ ಸಿಗಲಿದೆ ಎಂದು ಹೇಳಿದೆ. ಈ ದಿನ ಡಾಟ್ ಕಾಮ್ ಸರ್ವೆಯಲ್ಲಿ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ ನೀಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ 11 ಸ್ಥಾನ ಕೊಟ್ಟಿದೆ. ಈ ಹಿಂದೆಯೂ ಕೂಡ ಈ ದಿನ ಡಾಟ್ ಕಾಮ್ ಅಸೆಂಬ್ಲಿ ಎಲೆಕ್ಷನ್ ನಲ್ಲೂ ರಿಸಲ್ಟ್ ಬಗ್ಗೆ ನಿಖರ ರಿಪೋರ್ಟ್ ನೀಡಿತ್ತು. ಈ ದಿನ ಡಾಟ್ ಕಾಮ್ ಸಿಸ್ಟಮ್ಯಾಟಿಕ್ ರ್ಯಾಂಡಮ್ ಮಾದರಿಯ ಸರ್ವೆ ಮಾಡಿದ್ದು, 25-26 ಸೀಟ್ ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿ-ಜೆಡಿಎಸ್​ಗೆ ಬಿಗ್ ಶಾಕ್ ನೀಡಿದೆ.

 

ಫೆಬ್ರವರಿ 15ರಿಂದ ಮಾರ್ಚ್ 5ರವರೆಗೆ 52,678 ಮಾದರಿ ಪಡೆದು ರಿಪೋರ್ಟ್ ತಯಾರಿಸಿದ್ದು, ಕಾಂಗ್ರೆಸ್​ಗೆ ಕರ್ನಾಟಕದಲ್ಲಿ ಶೇ.43.77 ರಷ್ಟು ಮತ ಬೀಳುವ ಸಾಧ್ಯತೆ ಇದೆ ಎಂದು ಈ ದಿನ ಡಾಟ್ ಕಾಮ್ ಸರ್ವೆಯಲ್ಲಿ ಹೇಳಿದೆ. ಬಿಜೆಪಿ-ಜೆಡಿಎಸ್ ಮೈತ್ರಿಗೆ ಶೇ.42.35ರಷ್ಟು ವೋಟ್ ಬೀಳೋದಾಗಿ ಸರ್ವೆ ರಿಪೋರ್ಟ್ ನೀಡಿದೆ. ಸದ್ಯ ಈ ಬಾರಿ ಕಾಂಗ್ರೆಸ್ ಕೈ ಹಿಡಿಯುತ್ತಾ ಗ್ಯಾರಂಟಿ..? ಎಂಬುವುದು ಜೂನ್ 4ರಂದು ಲೋಕಸಭಾ ಎಲೆಕ್ಷನ್​ ನ  ಫಲಿತಾಂಶ ಬಂದ ಬಳಿಕವೇ ಗೊತ್ತಾಗಲಿದೆ.

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023ರ ಸಮಯದಲ್ಲಿ ಮತದಾನಕ್ಕೂ 21 ದಿನಗಳ ಮೊದಲು ಅತ್ಯಂತ ನಿಖರವಾದ ಸಮೀಕ್ಷೆಯ ಫಲಿತಾಂಶಗಳನ್ನು ಈದಿನ.ಕಾಮ್ ಪ್ರಕಟಿಸಿತ್ತು. ಈಗ, ಕರ್ನಾಟಕ ಲೋಕಸಭೆ ಚುನಾವಣೆ 2024ರ ಹೊಸ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ವ್ಯವಸ್ಥಿತ ವಿಭಿನ್ನ ಮಾದರಿ (ಸಿಸ್ಟಮ್ಯಾಟಿಕ್ ರ್ಯಾಂಡಮ್ ಮಾದರಿ) ವ್ಯವಸ್ಥೆಯ ಮೂಲಕ ಈದಿನ.ಕಾಮ್ ಮನೆ ಮನೆಗೆ ತೆರಳಿ ಮುಖಾಮುಖಿ ಸಮೀಕ್ಷೆ ನಡೆಸಿ, ನೆಲದ ವಾಸ್ತವತೆಯನ್ನು ಕಂಡುಕೊಂಡಿದೆ ಎಂದು ಸರ್ವೆ ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ : ಫೈನಲ್​ ಆಯ್ತು ಕಾಂಗ್ರೆಸ್​ನ ಸೆಕೆಂಡ್​ ಲಿಸ್ಟ್ ​- 21ರ ಪೈಕಿ 17 ಕ್ಷೇತ್ರಗಳ ಅಭ್ಯರ್ಥಿಗಳು ಫೈನಲ್..

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here