ಕಲಬುರಗಿ : ಶರಣಬಸವೇಶ್ವರ 202ನೇ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಹೋಮ್ ಗಾರ್ಡ್ ಸಿಬ್ಬಂದಿ ಸಾವನ್ನಪಿರುವ ಘಟನೆ ನಡೆದಿದೆ. ನಿನ್ನೆಯಿಂದ ಆರಂಭವಾದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ 28 ವರ್ಷದ ರಾಮು ಸಿದ್ದಪ್ಪ ಎಂಬಾತ ಹೋಮ್ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಚ್ಚಾಯಿ ತೇರು ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿದೆ.
ಭಕ್ತರನ್ನ ನಿಯಂತ್ರಿಸುವ ವೇಳೆ ಹೋಮ್ಗಾರ್ಡ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ರಾಮು ಸಿದ್ದಪ್ಪ ಬೀದರ್ ಜಿಲ್ಲೆ ಇಟಗಾ ಗ್ರಾಮದವರೆಂದು ತಿಳಿದುಬಂದಿದೆ. ಮತೋರ್ವ ಸಿಬ್ಬಂದಿ ಅಶೋಕ್ ರೆಡ್ಡಿಗೆ ಗಂಭೀರ ಗಾಯವಾಗಿರೊದ್ರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆ ಉಂಟಾದ ಗದ್ದಲದಿಂದ ಅನಾಹುತ ನಡೆದಿದೆ ಎನ್ನಲಾಗಿದೆ. ದುರ್ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ನಗರದ ಆರ್.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ : ಲೋಕಸಭಾ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟ..! –