ಬೆಂಗಳೂರು : ಚೀನಾದಲ್ಲಿ ಕೋರೋನ ವೈರಸ್ಗಿಂತಲೂ ವಿಭಿನ್ನವಾದ HMPV ವೈರಸ್ ಅಬ್ಬರಿಸುತ್ತಿದ್ದು, ಈ ವೈರಸ್ ಇದೀಗ ಕರ್ನಾಟಕದಲ್ಲೂ ಪತ್ತೆ ಆಗಿದೆ. ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾದ ಬೆನ್ನಲ್ಲೇ 3 ತಿಂಗಳ ಮಗುವಿನಲ್ಲೂ HMPV ಕೇಸ್ ಪತ್ತೆಯಾಗಿದೆ.
3 ತಿಂಗಳ ಹೆಣ್ಣು ಮಗುವನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 8 ವರ್ಷದ ಮಗುವಿಗೆ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಈಗ ಚೇತರಿಸಿಕೊಳ್ಳುತ್ತಿದೆ. ಚೀನಾ ವೈರಸ್ ರಾಜ್ಯಕ್ಕೆ ಎಂಟ್ರಿಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಗೈಡ್ಲೈನ್ಸ್ ರಿಲೀಸ್ ಮಾಡಿದೆ. ಮಕ್ಕಳು, ವಯಸ್ಕರು, ವೃದ್ದರು ಏನ್ ಮಾಡ್ಬೇಕು, ಏನೆಲ್ಲಾ ಮಾಡಬಾರದು ಅನ್ನೋ ಮುನ್ನೆಚ್ಚರಿಕೆ ಘೋಷಣೆ ಮಾಡಲಾಗಿದೆ.
ಗೈಡ್ಲೈನ್ಸ್ನಲ್ಲಿ ಏನಿದೆ..?
- ಕೆಮ್ಮು ಅಥವಾ ಸೀನುವಾಗ ಬಾಯಿ ಮುಚ್ಚಿರಿ
- ಖರ್ಚಿಫ್ ಅಥವಾ ಮಾಸ್ಕ್ನಿಂದ ಬಾಯಿ ಮುಚ್ಚಿಕೊಳ್ಳಬೇಕು
- ಆಗಾಗ್ಗೆ ಸ್ಯಾನಿಟೈಸರ್ ಬಳಸಿ ಕೈ ತೊಳೆಯಬೇಕು
- ಸೋಪು ಬಳಸಿ ಕೈತೊಳೆದುಕೊಳ್ಳುತ್ತಿರಿ
- ಲಕ್ಷಣ ಇದ್ದವರು ಜನರ ಗುಂಪಿನಲ್ಲಿ ಸೇರಬಾರದು
- ಜನಸಂದಣಿ ಪ್ರದೇಶದಲ್ಲಿ ಎಚ್ಚರಿಕೆ ವಹಿಸಬೇಕು
- ಜ್ವರ, ಶೀತ ಇದ್ದವರು ಹೆಚ್ಚಿನ ಜನರ ಸಂಪರ್ಕಕ್ಕೆ ಬರಬೇಡಿ
- ಬಳಸಿದ ಖರ್ಚಿಫ್ ಪದೇ-ಪದೇ ಬಳಸಬೇಡಿ
- ಸದಾ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳಬೇಡಿ
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
- ಆದಷ್ಟು ಗಾಳಿ, ಬೆಳಕು ಹೆಚ್ಚಿರುವ ಕಡೆ ವಾಸಿಸಿ
- ಸಾಕಷ್ಟು ಪ್ರಮಾಣದ ನೀರು ಕುಡಿಯುತ್ತಿರಿ
- ಪೌಷ್ಠಿಕಾಂಶ ಇರುವಂತಹ ಆಹಾರ ಸೇವನೆ ಮಾಡಿ
- ಎಲ್ಲೆಂದರಲ್ಲಿ ಟಿಶ್ಯೂ, ಖರ್ಚಿಫ್ ಬಿಡಬೇಡಿ
ಇದನ್ನೂ ಓದಿ : ಯಶ್ ಫ್ಯಾನ್ಸ್ಗೆ ಸರ್ಪ್ರೈಸ್.. ಪೋಸ್ಟರ್ ಮೂಲಕ ಅಪ್ಡೇಟ್ ಕೊಟ್ಟ ‘ಟಾಕ್ಸಿಕ್’ ಚಿತ್ರತಂಡ..!
Post Views: 1,232