Download Our App

Follow us

Home » ರಾಜಕೀಯ » ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿ ರಿಜ್ವಾನ್ ಅರ್ಷದ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್..!

ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿ ರಿಜ್ವಾನ್ ಅರ್ಷದ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್..!

ಬೆಂಗಳೂರು : ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿ ರಿಜ್ವಾನ್ ಅರ್ಷದ್ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ಅರ್ಜಿಯನ್ನ ವಜಾಗೊಳಿಸಿದೆ.

ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಮಾರ್ಚ್‌ 13ರಂದು ವಿಚಾರಣೆ ಪೂರ್ಣಗೊಳಿಸಿ, ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು.

ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ಗಳಾದ 123(1), 123(2), 123(4), 1236(6) ಅಡಿ ರಿಜ್ವಾನ್‌ ಅರ್ಷದ್‌ ಅವರು ಅಕ್ರಮ ಎಸಗಿದ್ದು, 100(1)(ಬಿ), (1)(ಡಿ)(iv) ಕಾಯಿದೆಯಡಿ ಆಯ್ಕೆಯಾಗಲು ಅವರು ಅರ್ಹರಲ್ಲ. ಆರು ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸದಂತೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇದೀಗ ಕೋರ್ಟ್​ ವಜಾಗೊಳಿಸಿದೆ.

ಶಾಸಕ ರಿಜ್ವಾನ್​ ಅರ್ಷದ್​ ಪರ ವಕೀಲ ಚುನಾವಣಾ ಪ್ರಣಾಳಿಕೆಯನ್ನು ಅಭ್ಯರ್ಥಿಯ ಅಕ್ರಮವೆಂದು ಪರಿಗಣಿಸಬಾರದು. ಚುನಾವಣಾ ಅಕ್ರಮಕ್ಕೆ ಸಾಕ್ಷ್ಯವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕೆಂದು ರಿಜ್ವಾನ್ ಅರ್ಷದ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದಿಸಿದ್ದರು.

ಇದನ್ನೂ ಓದಿ : ‘WAKE UP HINDUS’ ಎಂದು ಟ್ವೀಟ್ ಮಾಡಿದ ಸಂಸದ ಪ್ರತಾಪ್ ಸಿಂಹಗೆ ಸಂಕಷ್ಟ?

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here