ಗಾಂಧಿ ನಗರದಲ್ಲಿ ಹತ್ತು ಹಲವು ಸಿನಿಮಾಗಳು ಏಕಕಾಲಕ್ಕೆ ತೆರೆಕಾಣುವ ಸಂದರ್ಭ ಎದುರಾಗಿದೆ. ಅವುಗಳ ನಡುವೆ ‘ಹೈಡ್ ಆ್ಯಂಡ್ ಸೀಕ್’ ಸಿನಿಮಾ ಕೂಡ ಬರುತ್ತಿದೆ. ಅನೂಪ್ ರೇವಣ್ಣ ಹಾಗೂ ಧನ್ಯಾ ರಾಮ್ಕುಮಾರ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಡಾ. ರಾಜ್ಕುಮಾರ್ ಮೊಮ್ಮಗಳ ಸಿನಿಮಾ ಎಂಬ ಕಾರಣಕ್ಕೂ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಇದೆ.
ಕನ್ನಡ ಚಿತ್ರರಂಗದಲ್ಲಿ ಹೈಡ್ ಆ್ಯಂಡ್ ಸೀಕ್ ಸಿನಿಮಾ ಸಖತ್ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.. ರಾಜ್ಯಾದ್ಯಾಂತ 250ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಳ್ಳಲಿದೆ.. ಅದ್ರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬರ್ತ್ಡೇ ವಾರ ರಿಲೀಸ್ ಆಗೋ ಕಾರಣ ಈ ಸಿನಿಮಾ ಮೇಲೆ ಸಾಕಷ್ಟು ಕ್ಯೂರಿಯಾಸಿಟಿ ಇದೆ.
ಲಕ್ಷ್ಮಣನಾಗಿ ಸ್ಯಾಂಡಲ್ ವುಡ್ ಸಿನಿಪ್ರೇಕ್ಷಕರ ಎದುರು ಬಂದಿದ್ದ ಅನೂಪ್ ರೇವಣ್ಣ ಈಗ ಹೈಡ್ ಅಂಡ್ ಸೀಕ್ ಆಡಲು ಬರ್ತಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡವೀಗ ಬಿಡುಗಡೆಗೆ ಒಂದೊಳ್ಳೆ ಮುಹೂರ್ತ ಫಿಕ್ಸ್ ಮಾಡಿದೆ. ಮಾರ್ಚ್ 15ಕ್ಕೆ ಬೆಳ್ಳಿತೆರೆಯಲ್ಲಿ ಹೈಡ್ ಅಂಡ್ ಸೀಕ್ ಆಟ ಶುರುವಾಗಲಿದೆ.
ಹೈಡ್ ಅಂಡ್ ಸೀಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಅನೂಪ್ ಹಾಗೂ ನಾಯಕಿ ಧನ್ಯರಾಮ್ ಕುಮಾರ್ ಝಲಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ನಾಗರಾಜು, ವಸಂತ್ ಎಂ ರಾವ್ ಕುಲಕರ್ಣಿ ಜೊತೆಗೂಡಿ ಚಿತ್ರ ನಿರ್ಮಾಣದ ಜೊತೆಗೆ ನಿರ್ದೇಶನದ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ.
ಸ್ಯಾಂಡಿ ಅದ್ದಾನಿ ಸಂಗೀತ ತಂಪು, ರಿಜೋ ಪಿ ಜಾನ್ ಛಾಯಾಗ್ರಹಣದ ತಂಪು, ಮಧು ತುಂಬಕೆರೆ ಸಂಕಲನ ಹೈಡ್ ಅಂಡ್ ಸೀಕ್ ಚಿತ್ರಕ್ಕಿದೆ. ಸಖತ್ ಟ್ವಿಸ್ಟ್ ಅಂಡ್ ಟರ್ನ್ ಗಳಿರುವ ಚಿತ್ರ ಮಾರ್ಚ್ 15ಕ್ಕೆ ದರ್ಶನವಾಗಲಿದೆ.
ಇದನ್ನೂ ಓದಿ : ಮಾರ್ಚ್ 22 ರಿಂದ ಚಿತ್ರಮಂದಿರಗಳಿಗೆ “ಲೈನ್ ಮ್ಯಾನ್” ಆಗಮನ..!