Download Our App

Follow us

Home » ಮೆಟ್ರೋ » ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ – ಬೆಂಕಿಯ ಕೆನ್ನಾಲಿಗೆಗೆ ಐಷಾರಾಮಿ ಕಾರು ಸೇರಿ 5 ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆಗಳು ಭಸ್ಮ..!

ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ – ಬೆಂಕಿಯ ಕೆನ್ನಾಲಿಗೆಗೆ ಐಷಾರಾಮಿ ಕಾರು ಸೇರಿ 5 ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆಗಳು ಭಸ್ಮ..!

ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್​ ಕಂಟ್ರಿ ರೋಡ್​​ನಲ್ಲಿರುವ ಟಿಂಬರ್​ ಯಾರ್ಡ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಮೊದಲು ಟಿಂಬರ್​ ಯಾರ್ಡ್​ನಲ್ಲಿ ಕಾಣಿಸಿಕೊಂಡಿದೆ, ಬಳಿಕ ಲೋವಬಲ್​ ಸ್ಪೋರ್ಟ್​​ ಹೆಸರಿನ ಗಾರ್ಮೆಂಟ್ಸ್​​​​​​​ ಕಟ್ಟಡ, ವಾಹನ ವಾಶ್​​ ಕೇಂದ್ರಕ್ಕೂ ಹಬ್ಬಿದೆ.

ಗಾರ್ಮೆಂಟ್ಸ್​​​​​ ಫ್ಯಾಕ್ಟರಿಗೆ ಬೆಂಕಿ ತಗುಲಿದ ಪರಿಣಾಮ 5 ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆ ನಾಶವಾಗಿದೆ. ವಾಹನ ವಾಶ್ ಕೇಂದ್ರದಲ್ಲಿದ್ದ ಐಷಾರಾಮಿ ಕಾರು ಭಸ್ಮವಾಗಿದೆ. ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ 5 ಅಗ್ನಿಶಾಮಕ ದಳ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದ್ದಾರೆ.

ಮಧ್ಯರಾತ್ರಿ 12.30ರ ಸುಮಾರಿಗೆ ಮೊದಲಿಗೆ ಮರದ ಪೀಸ್ ಗಳನ್ನು ಇಟ್ಟಿದ್ದ ಟಿಂಬರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಎಡ ಭಾಗದಲ್ಲಿದ್ದ ಕಾರ್ ವಾಶ್ ಸರ್ವಿಸ್​ನ  ಕಾರುಗಳಿಗೆ ಬೆಂಕಿ ತಗುಲಿದೆ. ಜೊತೆಗೆ ಬಲಭಾಗದಲ್ಲಿದ್ದ ಗ್ಯಾರೇಜ್ ಗೂ ಬೆಂಕಿ ತಗುಲಿದೆ.

 

3 ಗಂಟೆ ಸುಮಾರಿಗೆ ಟಿಂಬರ್ ನಿಂದ 100 ಮೀ ಹಿಂದಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಯ ನಾಲ್ಕನೇ ಫ್ಲೋರ್​ನಲ್ಲಿದ್ದ ಬಟ್ಟೆ ಸ್ಟೋರೇಜ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟಿಂಬರ್ ಬಳಿ ಉರಿಯುತ್ತಿದ್ದ ಬೆಂಕಿಯಿಂದ ಕಿಡಿ ಹಾರಿ ಗಾರ್ಮೆಂಟ್ಸ್ ಗೆ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗಾರ್ಮೆಂಟ್ಸ್ 4ನೇ ಫ್ಲೋರ್ ನಲ್ಲಿದ್ದ 5 ಕೋಟಿಗೂ ಅಧಿಕ ಮೌಲ್ಯದ ಬಟ್ಟೆಗಳು ಬೆಂಕಿಗೆ ಆಹುತಿಯಾಗಿವೆ.  ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಹಾನಿ ಆಗಿಲ್ಲ.

ಇದನ್ನೂ ಓದಿ : ಏ.26 ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ – ಬಹಿರಂಗ ಪ್ರಚಾರಕ್ಕೆ ಇಂದು ತೆರೆ..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here