ನಕಲಿ ಕ್ಲಿನಿಕ್ಗಳಿಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಖಾಸಗಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆಯ ಹೆಸರು ಮತ್ತು ಮಾಲೀಕರ ಹೆಸರು ಪ್ರಕಟಿಸುವಂತೆ ಸೂಚನೆ ನೀಡಿದೆ.
ನಕಲಿ ವೈದ್ಯಕೀಯ ವೃತ್ತಿಯನ್ನು ಬೇರುಗಳಿಂದ ತೆಗೆದುಹಾಕಲು ಮಾಸ್ಟರ್ ಸ್ಟ್ರೋಕ್ಗರ ಮುಂದಾಗಿರುವ ಆರೋಗ್ಯ ಇಲಾಖೆ, ಖಾಸಗಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಕಡ್ಡಾಯವಾಗಿ ಕಟ್ಟಡದ ಮುಂದೆ ಅಗತ್ಯ ಮಾಹಿತಿ ಪ್ರಕಟಿಸುವುದು. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಕಲರ್ ಕೋಡ್ ಕಡ್ಡಾಯ ಬಳಸುವಂತೆ ಆದೇಶ ಹೊರಡಿಸಿದೆ.
ಕಲರ್ ಕೋಡ್ ಕಡ್ಡಾಯ ಬಳಸುವಂತೆ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಅಲೋಪತಿ ಆಸ್ಪತ್ರೆಗಳು ನೀಲಿ ಬಣ್ಣದ ಬೋರ್ಡ್ ಬಳಸಲು ಸೂಚನೆ ನೀಡಿದ್ದು, ಆಯುರ್ವೇದ ಖಾಸಗಿ ಆಸ್ಪತ್ರೆಗಳು ಹಸಿರು ಬಣ್ಣದ ಬೋರ್ಡ್ ಬಳಸಲು ಆದೇಶ ನೀಡಿದೆ. ಇದನ್ನು ಹೊರತುಪಡಿಸಿ ಖಾಸಗಿ ವೈದ್ಯಕೀಯ ಆಸ್ಪತ್ರೆಗಳು ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ KPME ತಿದ್ದುಪಡಿ ಕಾಯಿದೆ 2017 ಸೆಕ್ಷನ್ 19(5) ರ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಲು ಇಲಾಖೆ ಸಜ್ಜಾಗಿದೆ.
ಇದನ್ನೂ ಓದಿ : ರಾಷ್ಟ್ರ ನಾಯಕರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ನರೇಂದ್ರ ಮೋದಿ..!