Download Our App

Follow us

Home » ಅಪರಾಧ » SIT ನೋಟಿಸ್​ಗೆ ಪ್ರತಿಕ್ರಿಯಿಸಿದ ಹೆಚ್​.ಡಿ.ರೇವಣ್ಣ – ಹೇಳಿದ್ದೇನು?

SIT ನೋಟಿಸ್​ಗೆ ಪ್ರತಿಕ್ರಿಯಿಸಿದ ಹೆಚ್​.ಡಿ.ರೇವಣ್ಣ – ಹೇಳಿದ್ದೇನು?

ಬೆಂಗಳೂರು : ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಿಗಳಾದ ಎಚ್‌ಡಿ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪ್ರಾಥಮಿಕ ನೋಟಿಸ್‌ ಜಾರಿಗೊಳಿಸಿದೆ. ಬೆಂಗಳೂರು ಮತ್ತು ಹೊಳೆನರಸೀಪುರದಲ್ಲಿರುವ ರೇವಣ್ಣ ನಿವಾಸಕ್ಕೆ ನಿನ್ನೆಯೇ SIT ನೋಟಿಸ್​ ಅಂಟಿಸಿದೆ.

SIT ನೋಟಿಸ್ ಜಾರಿಯಾಗ್ತಿದ್ದಂತೆ ರೇವಣ್ಣ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ, ನೋಟಿಸ್​ಗೆ ಉತ್ತರ ನೀಡುವ ಸಂಬಂಧ ಸಲಹೆ ಪಡೆದಿದ್ದಾರೆ. ಇದೀಗ  SIT ನೋಟಿಸ್​ಗೆ ಉತ್ತರ ನೀಡಿರುವ ಹೆಚ್​.ಡಿ.ರೇವಣ್ಣ ಅವರು, ಮೇ 4ರಂದು SIT ಮುಂದೆ ಹಾಜರಾಗುವೆ. ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುವೆ ಎಂದು ತಿಳಿಸಿದ್ದಾರೆ.

ಪ್ರಜ್ವಲ್​ ರೇವಣ್ಣ ಫಾರಿನ್​​ನಿಂದ ಮೇ 3ರ ಸಂಜೆ ವಾಪಸ್​ ಆಗುವ ಸಾಧ್ಯತೆಯಿದ್ದು, ಅಪ್ಪ-ಮಗ ಇಬ್ಬರೂ ಒಂದೇ ದಿನ ವಿಚಾರಣೆಗೆ ಹೋಗ್ತಾರಾ..? ವಿಚಾರಣೆಗೆ ಹಾಜರಾಗದೇ ಕಷ್ಟ ಆಗಬಹುದು.
ಹೀಗಾಗಿ ವಿಚಾರಣೆಗೆ ಹಾಜರಾಗಲು ಅಪ್ಪ-ಮಗ ನಿರ್ಧರಿಸಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : ಯಾದಗಿರಿ, ಕಲಬುರಗಿಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ..!

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here