ಮಂಡ್ಯ : ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ್ದನ್ನು ಖಂಡಿಸಿ ಹಿಂದೂ ಸಂಘಟನೆಗಳು ಇಂದು ಮಂಡ್ಯ ನಗರ ಬಂದ್‌ಗೆ ಕರೆ ಕೊಟ್ಟಿದೆ. ಬಾವುಟ ತೆರವು ಮಾಡಿದ ಕ್ಷಣದಿಂದಲೂ ಬೂದಿಮುಚ್ಚಿದ ಕೆಂಡದಂತಿರೋ ಕೆರಗೋಡು ಗ್ರಾಮದಲ್ಲಿ ಇಂದು ಪ್ರತಿಭಟನೆಯ ಬಿಸಿ ತಟ್ಟಲಿದೆ.
ಬೆಳಗ್ಗೆ 9 ಗಂಟೆ ನಂತರ ಹೋರಾಟಗಾರರು ಬೈಕ್ ರ್ಯಾಲಿ ಆರಂಭಿಸಲಿದ್ದಾರೆ. ಭಜರಂಗದಳ, ವಿಶ್ವ ಹಿಂದೂಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಬಂದ್‌ಗೆ ಮುಂದಾಗಿವೆ. ಸಂಜೆ 6 ಗಂಟೆಯವರೆಗೂ ಈ ಬಂದ್ನ ಬಿಸಿ ಇರಲಿದೆ.
ನಗರದ ಅಂಗಡಿ ವ್ಯಾಪಾರಿಗಳಿಗೆ ಗುಲಾಬಿ ಹೂ ನೀಡಿ ಮನವಿ ಮಾಡಿದ್ದು, ಕೆರಗೋಡುವಿನಿಂದ ಮಂಡ್ಯವರೆಗೂ ಬೃಹತ್ ಮೆರವಣಿಗೆ ನಡೆಯಲಿದೆ. ಮೊದಲು ಹಿಂದೂ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದು, ಬಳಿಕ ಅಲ್ಲಿಂದ ನೂರಾರು ಬೈಕ್ಗಳ ಮೂಲಕ ಮಂಡ್ಯಕ್ಕೆ ಬರಲಿದ್ದಾರೆ. ಸಿಲ್ವರ್ ಜುಬಿಲಿ ಪಾರ್ಕ್‌ನಲ್ಲಿರುವ ಆಂಜನೇಯನ ದೇವಾಲಯದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಲಿದ್ದಾರೆ.
ಬಂದ್ ಬಗ್ಗೆ ಮಂಡ್ಯ ಬಿಜೆಪಿ ಮುಖಂಡ ಅಶೋಕ್ ಜಯರಾಂ ಪ್ರತಿಕ್ರಿಯಿಸಿ, ಬಂದ್‌ಗೆ ಬಿಜೆಪಿ, ಜೆಡಿಎಸ್ ಬೆಂಬಲ ಸೂಚಿಸಿಲ್ಲ. ಅಂಗಡಿ ಮುಗ್ಗಟ್ಟು ಬಲವಂತವಾಗಿ ಮುಚ್ಚಿಸುವುದಿಲ್ಲ, ಜನರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ರೆ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ‘ಉಪಾಧ್ಯಕ್ಷ’ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿ ಚಿಕ್ಕಣ್ಣ ಹಾಗೂ ಚಿತ್ರತಂಡ…!