Download Our App

Follow us

Home » ಜಿಲ್ಲೆ » ಮುಡಾ ಅಕ್ರಮಕ್ಕೆ ಮೊದಲ ವಿಕೆಟ್ ಪತನ – ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಸಸ್ಪೆಂಡ್..!

ಮುಡಾ ಅಕ್ರಮಕ್ಕೆ ಮೊದಲ ವಿಕೆಟ್ ಪತನ – ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಸಸ್ಪೆಂಡ್..!

ಮೈಸೂರು : ಮುಡಾ ಹಗರಣ ಪ್ರಕರಣದಲ್ಲಿ ಮೊದಲ ವಿಕೆಟ್ ಪತನವಾಗಿದೆ. ಸೈಟ್​ ಹಂಚಿಕೆ ಹಗರಣದಲ್ಲಿ ಮುಡಾ ಹಿಂದಿನ ಆಯುಕ್ತ ಜಿ.ಟಿ.ದಿನೇಶ್​​ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಜಿ.ಟಿ.ದಿನೇಶ್​​ ಕುಮಾರ್ ಅವರ ವಿರುದ್ಧ ಬದಲಿ ಸೈಟ್​ ಹಂಚಿಕೆಯಲ್ಲಿ ವ್ಯಾಪಕ ಅಕ್ರಮ ಮಾಡಿದ್ದ ಆರೋಪವಿದೆ. ಅಷ್ಟೆ ಅಲ್ಲದೆ ಲೇಔಟ್​ ಡೆವಲಪ್​ಮೆಂಟ್​ ವೇಳೆಯೂ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹಗರಣ ಬಯಲಾದ ಎರಡು ತಿಂಗಳ ನಂತರ ಮೊದಲ ತಲೆದಂಡವಾಗಿದೆ. ಮೂರು ದಿನದ ಹಿಂದೆ ಜಿ.ಟಿ.ದಿನೇಶ್​​ ಕುಮಾರ್ ಅವರನ್ನು ಹಾವೇರಿ ವಿವಿ ರಿಜಿಸ್ಟ್ರಾರ್​ ಆಗಿ ವರ್ಗಾಯಿಸಲಾಗಿತ್ತು. ಇದೀಗ ಮುಡಾ ಅಕ್ರಮ ಆರೋಪದಲ್ಲಿ ಸರ್ಕಾರ ಸಸ್ಪೆಂಡ್ ಮಾಡಿದೆ.

2023ರಲ್ಲಿ ಟಿ.ವಿ.ಮುರಳಿ ನೇತೃತ್ವದ ತಾಂತ್ರಿಕ ಸಮಿತಿ ವರದಿ ಆಧರಿಸಿ ಸಸ್ಪೆಂಡ್ ಮಾಡಲಾಗಿದ್ದು, ಸೈಟ್​ ಹಂಚಿಕೆ ಅಕ್ರಮ, ಸ್ವಾಧೀನ, ಪರಿಹಾರ ಪ್ರಕ್ರಿಯೆಯಲ್ಲಿ ಅಕ್ರಮ, ನಿಯಮಬಾಹಿರವಾಗಿ 50-50 ನಿವೇಶನ ಹಂಚಿಕೆಗೆ ಮಂಡಳಿಯಲ್ಲಿ ನಿರ್ಧಾರ, ಸರ್ಕಾರದಿಂದ ನೀಡಲಾದ ನಿರ್ದೇಶನ ಸರಿಯಾಗಿ ಪಾಲಿಸಿಲ್ಲ. ಉದ್ಯಾನ, ನಾಗರಿಕ ಸೌಲಭ್ಯಕ್ಕೆ ಮೀಸಲಿಡುವಲ್ಲೂ ನಿಯಮ ಉಲ್ಲಂಘನೆ
ಇದೆಲ್ಲಾ ಆರೋಪ ಹಿನ್ನೆಲೆಯಲ್ಲಿ ಸರ್ಕಾರ ದಿನೇಶ್​ಕುಮಾರ್​ಗೆ ಸಸ್ಪೆಂಡ್​ ಶಾಕ್ ಕೊಟ್ಟಿದೆ.

ಇದನ್ನೂ ಓದಿ : ದುಬೈನಲ್ಲಿ ‘ಕೃಷ್ಣಂ ಪ್ರಣಯ ಸಖಿ’ ವಿಶೇಷ ಪ್ರದರ್ಶನ – ಸಿನಿಮಾ ನೋಡಿ ದುಬೈ ಕನ್ನಡಿಗರು ಫಿದಾ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here