ಮೈಸೂರು : ಮುಡಾ ಹಗರಣ ಪ್ರಕರಣದಲ್ಲಿ ಮೊದಲ ವಿಕೆಟ್ ಪತನವಾಗಿದೆ. ಸೈಟ್ ಹಂಚಿಕೆ ಹಗರಣದಲ್ಲಿ ಮುಡಾ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿ.ಟಿ.ದಿನೇಶ್ ಕುಮಾರ್ ಅವರ ವಿರುದ್ಧ ಬದಲಿ ಸೈಟ್ ಹಂಚಿಕೆಯಲ್ಲಿ ವ್ಯಾಪಕ ಅಕ್ರಮ ಮಾಡಿದ್ದ ಆರೋಪವಿದೆ. ಅಷ್ಟೆ ಅಲ್ಲದೆ ಲೇಔಟ್ ಡೆವಲಪ್ಮೆಂಟ್ ವೇಳೆಯೂ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹಗರಣ ಬಯಲಾದ ಎರಡು ತಿಂಗಳ ನಂತರ ಮೊದಲ ತಲೆದಂಡವಾಗಿದೆ. ಮೂರು ದಿನದ ಹಿಂದೆ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಹಾವೇರಿ ವಿವಿ ರಿಜಿಸ್ಟ್ರಾರ್ ಆಗಿ ವರ್ಗಾಯಿಸಲಾಗಿತ್ತು. ಇದೀಗ ಮುಡಾ ಅಕ್ರಮ ಆರೋಪದಲ್ಲಿ ಸರ್ಕಾರ ಸಸ್ಪೆಂಡ್ ಮಾಡಿದೆ.
2023ರಲ್ಲಿ ಟಿ.ವಿ.ಮುರಳಿ ನೇತೃತ್ವದ ತಾಂತ್ರಿಕ ಸಮಿತಿ ವರದಿ ಆಧರಿಸಿ ಸಸ್ಪೆಂಡ್ ಮಾಡಲಾಗಿದ್ದು, ಸೈಟ್ ಹಂಚಿಕೆ ಅಕ್ರಮ, ಸ್ವಾಧೀನ, ಪರಿಹಾರ ಪ್ರಕ್ರಿಯೆಯಲ್ಲಿ ಅಕ್ರಮ, ನಿಯಮಬಾಹಿರವಾಗಿ 50-50 ನಿವೇಶನ ಹಂಚಿಕೆಗೆ ಮಂಡಳಿಯಲ್ಲಿ ನಿರ್ಧಾರ, ಸರ್ಕಾರದಿಂದ ನೀಡಲಾದ ನಿರ್ದೇಶನ ಸರಿಯಾಗಿ ಪಾಲಿಸಿಲ್ಲ. ಉದ್ಯಾನ, ನಾಗರಿಕ ಸೌಲಭ್ಯಕ್ಕೆ ಮೀಸಲಿಡುವಲ್ಲೂ ನಿಯಮ ಉಲ್ಲಂಘನೆ
ಇದೆಲ್ಲಾ ಆರೋಪ ಹಿನ್ನೆಲೆಯಲ್ಲಿ ಸರ್ಕಾರ ದಿನೇಶ್ಕುಮಾರ್ಗೆ ಸಸ್ಪೆಂಡ್ ಶಾಕ್ ಕೊಟ್ಟಿದೆ.
ಇದನ್ನೂ ಓದಿ : ದುಬೈನಲ್ಲಿ ‘ಕೃಷ್ಣಂ ಪ್ರಣಯ ಸಖಿ’ ವಿಶೇಷ ಪ್ರದರ್ಶನ – ಸಿನಿಮಾ ನೋಡಿ ದುಬೈ ಕನ್ನಡಿಗರು ಫಿದಾ..!