Download Our App

Follow us

Home » ಕ್ರೀಡೆ » ತವರಿಗೆ ಬಂದ ವಿಶ್ವ ವಿಜೇತರಿಗೆ ಭವ್ಯ ಸ್ವಾಗತ – ಇಂದು ವಾಣಿಜ್ಯ ನಗರಿಯಲ್ಲಿ ವಿಜಯ ಯಾತ್ರೆ, ಟ್ರೋಫಿ ಜೊತೆಗೆ ಸಂಭ್ರಮಾಚರಣೆ..!

ತವರಿಗೆ ಬಂದ ವಿಶ್ವ ವಿಜೇತರಿಗೆ ಭವ್ಯ ಸ್ವಾಗತ – ಇಂದು ವಾಣಿಜ್ಯ ನಗರಿಯಲ್ಲಿ ವಿಜಯ ಯಾತ್ರೆ, ಟ್ರೋಫಿ ಜೊತೆಗೆ ಸಂಭ್ರಮಾಚರಣೆ..!

ನವದೆಹಲಿ : ಭಾರತಕ್ಕೆ ಟಿ20 ವಿಶ್ವಕಪ್​​​​ ಚಾಂಪಿಯನ್​ ವೀರರ ಆಗಮನವಾಗಿದೆ. 3 ದಿನ ತಡವಾಗಿ ಭಾರತಕ್ಕೆ ಎಂಟ್ರಿಕೊಟ್ಟ ರೋಹಿತ್​ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇನ್ನು ಬಾರ್ಬಡೋಸ್​​​ನಂತೆ ಭಾರತದಲ್ಲಿ ಸಂಭ್ರಮ ಮರುಸೃಷ್ಟಿಯಾಗಲಿದ್ದು, ಅದಕ್ಕೆ ಕೌಂಟ್​ಡೌನ್​ ಶುರುವಾಗಿದೆ.

ಬೆರಿಲ್​ ಚಂಡಮಾರುತದ ಪರಿಣಾಮ ಕಳೆದ ಮೂರು ದಿನಗಳಿಂದ ಟೀಂ ಇಂಡಿಯಾ ವೆಸ್ಟ್​ಇಂಡೀಸ್​​ನ ಬಾರ್ಬಡೊಸ್​ನಲ್ಲಿ ಉಳಿದುಕೊಂಡಿತ್ತು. ಬಿಸಿಸಿಐ ವಿಶೇಷ ಮುತುವರ್ಜಿ ವಹಿಸಿ ಚಾರ್ಟರ್ಡ್​ ಫ್ಲೈಟ್​ ಮೂಲಕ ಆಟಗಾರರನ್ನ ದೇಶಕ್ಕೆ ಕರೆತಂದಿದೆ. ಇಂದು ಬೆಳಿಗ್ಗೆ 6 ಗಂಟೆಗೆ ರೋಹಿತ್​ & ಟೀಮ್​​ ದೆಹಲಿಗೆ ಬಂದಿಳಿದಿದೆ.

ಬೆಳಗಿನ ಜಾವ ಭಾರತಕ್ಕೆ ಆಗಮಿಸಿದ ವಿಶ್ವ ಗೆದ್ದ ವೀರ ಕಲಿಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿದಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್​​ ವಿಜೇತ ತಂಡದ ಜೊತೆ ಉಪಹಾರ ಕೂಟವನ್ನ ಹಮ್ಮಿಕೊಂಡಿದ್ದಾರೆ. ಇದು ಮುಗಿಯುತ್ತಿದ್ದಂತೆ ಇಡೀ ತಂಡ ಮುಂಬೈನತ್ತ ಪ್ರಯಾಣ ಬೆಳೆಸಲಿದೆ.

4 ಗಂಟೆಗೆ ದೆಹಲಿಯಿಂದ ಮುಂಬೈಗೆ ಆಗಮನ – ದೆಹಲಿಯಿಂದ ನಾಲ್ಕು ಗಂಟೆಗೆ ಹೊರಡುವ ಟೀಮ್ ಇಂಡಿಯಾ ಆಟಗಾರರು ನೇರವಾಗಿ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. 5 ಗಂಟೆ ವೇಳೆಗೆ ಮರೀನ್​ ಡ್ರೈವ್​​ಗೆ ಎಂಟ್ರಿಕೊಡಲಿದ್ದಾರೆ. ವಿಶ್ವಕಪ್​​ ಜಯಿಸಿ ಬಾರ್ಬಡೋಸ್​ನಲ್ಲಿ ಸಂಭ್ರಮಾಚರಣೆ ಮಾಡಿದ್ದ ರೋಹಿತ್ ಪಡೆ ಭಾರತದಲ್ಲೂ ಸಂಭ್ರಮಿಸಲಿದೆ. ಮರೀನ್​​​ ಡ್ರೈವ್​ನಿಂದ ವಾಂಖೆಡೆ ಮೈದಾನದ ತನಕ ತೆರೆದ ಬಸ್​ನಲ್ಲಿ ಮೆರವಣಿಗೆ ನಡೆಯಲಿದೆ. ಸುಮಾರು 2 ಗಂಟೆಗಳ ಕಾಲ ಮೆರವಣಿಗೆ ಸಾಗಲಿದ್ದು, ಆಟಗಾರರು ಟ್ರೋಫಿ ಜೊತೆ ಈ ಸಂಭ್ರಮದಲ್ಲಿ ಮುಳುಗಲಿದ್ದಾರೆ.

ಈ ಬಗ್ಗೆ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ‘ಬನ್ನಿ ಸಂಭ್ರಮಿಸೋಣ’ ಎಂದು ಅಭಿಮಾನಿಗಳಿಗೆ ಟ್ವೀಟ್ ಮೂಲಕ ಆಹ್ವಾನಿಸಿದ್ದಾರೆ. “ನಾನು ವಿಶೇಷವಾದ ಕ್ಷಣವನ್ನ ನಿಮ್ಮೊಂದಿಗೆ ಸಂಭ್ರಮಿಸಲು ಬಯಸುತ್ತೇವೆ. ಈ ಗೆಲುವನ್ನ ಮರೀನ್​ ಡ್ರೈವ್​ನಿಂದ ವಾಂಖೆಡೆವರೆಗೆ ಗೆಲುವಿನ ಯಾತ್ರೆಯ ಮೂಲಕ ಸಂಭ್ರಮಿಸೋಣ. ಇಂದು ಸಂಜೆ 5 ಗಂಟೆಯಿಂದ. ಟ್ರೋಫಿ ಮನೆಗೆ ಬರುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ಓಪನ್​ ಬಸ್​​ ಪರೇಡ್​ ಬಳಿಕ ಐಕಾನಿಕ್​​​ ವಾಂಖೆಡೆ ಮೈದಾನದಲ್ಲಿ ಅವಿಸ್ಮರಣೀಯ ಸಮಾರಂಭ ನಡೆಯಲಿದೆ. ಈ ವೇಳೆ ವಿಶ್ವಕಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಟೀಮ್ ಇಂಡಿಯಾ ಆಟಗಾರರು, ಕೋಚಸ್​ ಹಾಗೂ ಸಪೋರ್ಟಿಂಗ್ ಸ್ಟಾಪ್​​​​​​ಗೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನವನ್ನ ವಿತರಿಸಲಿದೆ.

ಇದನ್ನೂ ಓದಿ : 4 ವರ್ಷ ಸ್ಮಶಾನದಲ್ಲಿ ಕಳೆದಿದ್ದ ಈ ಕನ್ನಡಿಗ ಇಂದು ಟೀಂ ಇಂಡಿಯಾದ ಬೆನ್ನೆಲುಬು – ಥ್ರೋಡೌನ್ ಸ್ಪೆಷಲಿಸ್ಟ್​​ನ ರೋಚಕ ಸ್ಟೋರಿಯಿದು..!

 

 

 

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here