ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ 16 ಎಕರೆ ಜಮೀನು ಕಬಳಿಸಿದ ಆರೋಪದ ಮೇರೆಗೆ ಜೇಡರಹಳ್ಳಿ ಕೃಷ್ಣಪ್ಪನನ್ನು ಬ್ಯಾಡರಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜೇಡರಹಳ್ಳಿ ಕೃಷ್ಣಪ್ಪ ಸೇರಿ 8 ಜನರ ವಿರುದ್ಧ 506, 341, 34, 504, 406, 420, 465, 468, 471, 323 ಸೆಕ್ಷನ್ ಅಡಿ FIR ದಾಖಲಾಗಿದೆ. ಹೇರೋಹಳ್ಳಿ ಬಳಿ 16 ಎಕರೆ 37 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿರೋ ಆರೋಪ ಜೇಡರಹಳ್ಳಿ ಕೃಷ್ಣಪ್ಪನ ಮೇಲಿದೆ. ಕೃಷ್ಣಪ್ಪ ವಿರುದ್ಧ ಜಮೀನು ಮಾಲೀಕ ಶಂಕರಪ್ಪ ಎಂಬುವರು ದೂರು ನೀಡಿದ್ದು, ಅದರ ಅನ್ವಯ ಪೊಲೀಸರು ಜೇಡರಹಳ್ಳಿ ಕೃಷ್ಣಪ್ಪನನ್ನು ಅರೆಸ್ಟ್ ಮಾಡಿದ್ದಾರೆ.
ಶಂಕರಪ್ಪ ಅವರ ಪಿತ್ರಾರ್ಜಿತ ಆಸ್ತಿಯಾಗಿದ್ದು, ತಮ್ಮ ಪಾಲಿನ ನಾಲ್ಕು ಎಕರೆ 13ಗುಂಟೆ ಜಾಗವನ್ನ ಶಂಕ್ರಪ್ಪ ಅಭಿವೃದ್ಧಿ ಮಾಡಿಸ್ತಿದ್ದ. ಈ ನಡುವೆ ಅಲ್ಲಿಗೆ ಬಂದಿದ್ದ ಕೃಷ್ಣಮೂರ್ತಿ, ಗೋವಿಂದರಾಜು ಹಾಗೂ ಇತರರಿಂದ ಜೀವ ಬೆದರಿಕೆ ಆರೋಪ ವ್ಯಕ್ತವಾಗಿದೆ.
ನಮ್ಮ ಹೆಸ್ರಲ್ಲಿ ಜಮೀನಿದೆ, ಅಭಿವೃದ್ಧಿ ಕೆಲಸ ನಿಲ್ಲಿಸಿ, ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಅನ್ನೊ ಆರೋಪ ಕೇಳಿಬಂದಿದೆ. ಹಾಗಾಗಿ ಜೇಡರಹಳ್ಳಿ ಕೃಷ್ಣಪ್ಪ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಲಕ್ಷ್ಮಣ ಸವದಿ ಫ್ಲೆಕ್ಸ್ ಗಳಲ್ಲಿ ಕೇಸರಿ ವಾಪಸ್ : ಬಿಜೆಪಿಯತ್ತ ಹೊರಟ್ರಾ ಕಾಂಗ್ರೆಸ್ ಎಂಎಲ್ಎ?