ಬೆಂಗಳೂರು : ನಗರದ ನಾಗರಬಾವಿಯಲ್ಲಿರುವ ಗುಡ್ವಿಲ್ ಕಾಲೇಜ್ನ ದೋಖಾ ಸಾಬೀತಾಗಿದ್ದು, ಇಲಾಖೆಯ ಪರಿಶೀಲನೆಯಲ್ಲೇ ಗುಡ್ ವಿಲ್ ಕಾಲೇಜ್ನ ಮಹಾವಂಚನೆ ಬಯಲಾಗಿದೆ. ಬಿಟಿವಿ ಬಿಗ್ ಇಂಪ್ಯಾಕ್ಟ್ನಿಂದ ಗುಡ್ ವಿಲ್ ಕಾಲೇಜು ಬಾಗಿಲು ಬಂದ್ ಆಗೋದು ಫಿಕ್ಸ್ ಆಗಿದೆ.
ಗುಡ್ವಿಲ್ ಕಾಲೇಜ್ ಬೋಗಸ್ ನಕಲಿ ಎನ್ನುವುದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ರಿಪೋರ್ಟ್ನಲ್ಲಿ ಬಹಿರಂಗವಾಗಿದೆ. ಪಿಯು ನಿರ್ದೇಶಕರಿಗೆ ಬರೆದ ಸುದೀರ್ಘ ಪತ್ರದಲ್ಲಿ ವಿವರಣೆಯಿದ್ದು, ಈ ಪತ್ರದ ಪ್ರತಿ BTVಗೆ ಲಭ್ಯವಾಗಿದೆ.
ಕಾಂಪ್ಲೆಕ್ಸ್ನಂಥಾ ಕಟ್ಟಡದಲ್ಲಿ ನಡೀತಿರುವ ಗುಡ್ವಿಲ್ ಕಾಲೇಜು ಅಕ್ರಮ ಅಡ್ಮಿಷನ್ ಮಾಡಿಸುತ್ತಿತ್ತು, ಸತ್ಯ ಗೊತ್ತಿಲ್ದೆ ವಿದ್ಯಾರ್ಥಿಗಳು ಈ ಕಾಲೇಜಿಗೆ ಜಾಯಿನ್ ಆಗುತ್ತಿದ್ದರು. ಬೆಂಗಳೂರಿನ ಗುಡ್ವಿಲ್ ಕಾಲೇಜು ಅಕ್ಕಪಕ್ಕದವರ ಭೂಮಿ ತೋರಿಸಿ ಶಿಕ್ಷಣ ಇಲಾಖೆಗೆ ವಂಚನೆ ಮಾಡಿತ್ತು. ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿರೋ ಗುಡ್ವಿಲ್ ಕಾಲೇಜುಗೆ DDPU ಭೇಟಿ ನೀಡಿದ್ದಾಗ ಸತ್ಯ ಒಪ್ಪಿಕೊಂಡಿದ್ದ ಕಾಲೇಜು ಆಡಳಿತ, ಕಾಲೇಜು ಮುಚ್ಚಿ, ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡ್ತೀವಿ ಎಂದು ತಿಳಿಸಿತ್ತು.
DDPU ನೋಟಿಸ್ ಬೆನ್ನಲ್ಲೇ ಕಾಲೇಜು ಮುಚ್ಚುತ್ತೇವೆ ಎಂದು ಸ್ವತ: ಕಾಲೇಜು ಟ್ರಸ್ಟ್ ಬರೆದುಕೊಟ್ಟಿತ್ತು. ಆದರೆ ನಂತರ ಏಕಾಏಕಿ ಅಡ್ಮಿಷನ್ ಆರಂಭಿಸಿ, ನಿಗದಿತ ಮೂಲಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳಿಂದ ಎಜುಕೇಶನ್ ಟ್ರಸ್ಟ್ ಕೋಟಿ ಕೋಟಿ ಫೀಸ್ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಇದೀಗ ಇಲಾಖೆಯ ಪರಿಶೀಲನೆಯಲ್ಲೇ ಗುಡ್ ವಿಲ್ ಕಾಲೇಜ್ನ ಮಹಾವಂಚನೆ ಬಯಲಾಗಿದೆ.
ಇದನ್ನೂ ಓದಿ : ನನ್ನ ಬಳಿ ಯಾವುದೇ ಸ್ವಂತ ಮೊಬೈಲ್ ಇಲ್ಲ : ಪ್ರಜ್ವಲ್ ರೇವಣ್ಣ ಹೊಸ ವರಸೆ..!