Download Our App

Follow us

Home » ರಾಜ್ಯ » ರಾಜ್ಯದಲ್ಲೂ ಗೋಬಿ ಮಂಚೂರಿ ಬ್ಯಾನ್? ಬಾಂಬೆ ಮಿಠಾಯಿ ಬೆನ್ನಲ್ಲೇ ಗೋಬಿ ಸ್ಯಾಂಪಲ್ ಟೆಸ್ಟ್‌ಗೆ ಸಿದ್ದತೆ…!

ರಾಜ್ಯದಲ್ಲೂ ಗೋಬಿ ಮಂಚೂರಿ ಬ್ಯಾನ್? ಬಾಂಬೆ ಮಿಠಾಯಿ ಬೆನ್ನಲ್ಲೇ ಗೋಬಿ ಸ್ಯಾಂಪಲ್ ಟೆಸ್ಟ್‌ಗೆ ಸಿದ್ದತೆ…!

ಬೆಂಗಳೂರು : ಇತ್ತೀಚಿಗಷ್ಟೇ ಗೋವಾದಲ್ಲಿ ಸಸ್ಯಾಹಾರಿಗಳು ಹಾಗೂ ಮಾಂಸಹಾರಿಗಳ ಪ್ರಿಯವಾದ ಗೋಬಿ ಮಂಚೂರಿಯನ್ನು ಬ್ಯಾನ್ ಮಾಡಿದ್ದಾರೆ. ಇದೀಗ ರಾಜ್ಯದಲ್ಲಿಯೂ ಗೋಬಿ ಮಂಚೂರಿಗೆ ಬ್ರೇಕ್ ಬೀಳಲಿದ್ಯಾ…? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಹೌದು.. ಬಾಂಬೆ ಮಿಠಾಯಿ ಬೆನ್ನಲ್ಲೇ ಗೋಬಿ ಸ್ಯಾಂಪಲ್ ಟೆಸ್ಟ್‌ಗೆ ಆರೋಗ್ಯ ಇಲಾಖೆ ಸಿದ್ದತೆ ನಡೆಸುತ್ತಿದೆ. ಗೋಬಿ ಮಂಚೂರಿಯಲ್ಲಿ ಬಳಸುವ ಮೈದಾ, ಸಾಸ್ ಹಾಗೂ ಕೃತಕ ಬಣ್ಣ ಜೀವಕ್ಕೆ ಅಪಾಯಕಾರಿಯಾಗಿದೆ. ಹೀಗಾಗಿ ರಾಜ್ಯದಲ್ಲೂ ಗೋಬಿ ಬ್ಯಾನ್ ಮಾಡುವ ಸಾಧ್ಯತೆಯಿದೆ.

ಈಗಾಗಲೇ ಗೋವಾದಲ್ಲಿ ಗೋಬಿ ಮಂಚೂರಿ ಬ್ಯಾನ್ ಆಗಿದೆ. ಮಂಚೂರಿಯ ಸಂಶ್ಲೇಷಿತ ಬಣ್ಣ ಮತ್ತು ನೈರ್ಮಲ್ಯದ ಮೇಲಿನ ಕಾಳಜಿಯಿಂದ ಗೋವಾದ ನಗರವಾದ ಮಾಪುಸಾದಲ್ಲಿ ಗೋಬಿ ಮಂಚೂರಿಯನ್ ಅನ್ನು ಮಳಿಗೆಗಳಲ್ಲಿ ಮತ್ತು ಹಬ್ಬಗಳಲ್ಲಿ ಈ ಖಾದ್ಯವನ್ನು ನಿಷೇಧಿಸುವಂತೆ ಮಾಡಿದೆ.

ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಮಾತ್ರವಲ್ಲ ಈ ಹಿಂದೆ 2022ರಲ್ಲಿ ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಜಾತ್ರೆಯ ಸಂದರ್ಭದಲ್ಲಿ ಕೂಡ ಗೋಬಿ ಮಂಚೂರಿಯನ್ ಮಾರಾಟ ಮಾಡದಂತೆ ಸ್ಟಾಲ್‌ಗಳನ್ನು ನಿರ್ಬಂಧಿಸಲು ಎಫ್‌ಡಿಎ ಮೊರ್ಮುಗಾವೊ ಮುನ್ಸಿಪಲ್ ಕೌನ್ಸಿಲ್‌ಗೆ ಸೂಚನೆಗಳನ್ನು ನೀಡಿತ್ತು. ಇದೀಗ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕದಲ್ಲೂ ಗೋಬಿ ಮಂಚೂರಿ ಬ್ಯಾನ್ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಟ್ರೈನ್​ಗೆ ಬೆಂಕಿ ಹಚ್ಚುತ್ತೇನೆಂದು ಅನ್ಯಕೋಮಿನ ಯುವಕನಿಂದ ಬೆದರಿಕೆ : ಮೈಸೂರು-ಅಯೋಧ್ಯೆ ರೈಲು 2 ಗಂಟೆ ಸ್ಥಗಿತ..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here