ಚಿತ್ರದುರ್ಗ : ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 12 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸದುರ್ಗ ತಾಲೂಕಿನ ಗುಡ್ಡದ ನೆಲ್ಲಿಕೆರೆ ಗ್ರಾಮದ ಕೃಪಾ ಎಂಬಾಕೆ ಮೃತ ದುರ್ದೈವಿಯಾಗಿದ್ದು, ವೈದ್ಯರು ಹೈ ಡೋಸ್ ಇಂಜೆಕ್ಷನ್ ನೀಡಿದ್ದರಿಂದ 12 ವರ್ಷದ ಕೃಪಾ ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿದೆ.
ತಂದೆ ಶಾಂತಮೂರ್ತಿ, ತಾಯಿ ಶ್ವೇತಾ ದಂಪತಿಗಳಗಳ ಮಗಳು ಕೃಪಾ. ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಕೃಪಾ 7 ನೇ ತರಗತಿ ಓದುತ್ತಿದ್ದಳು. ಕೆಮ್ಮುಅಂತಾ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ಇಂಜೆಕ್ಷನ್ ನೀಡುತ್ತಲೇ ಕೃಪಾ ಕುಸಿದುಬಿದ್ದಿದ್ದಾಳೆ. ನಂತ್ರ ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ವೈದ್ಯರು ಕಳುಹಿಸಿ ಕೊಟ್ಟಿದ್ದಾರೆ. ಜಿಲ್ಲಾಸ್ಪತ್ರೆಗೆ ಹೋಗಲು ಹೇಳಿದ್ರೂ ಆದ್ರೆ, ವೈದ್ಯಾಧಿಕಾರಿ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಈ ವೇಳೆ ವೈದ್ಯರು ಕೊಟ್ಟ ಹೈ ಡೋಸ್ ಇಂಜೆಕ್ಷನ್ ರಿಯಾಕ್ಷನ್ ಆಗಿ ಕೃಪಾ ಮೃತಪಟ್ಟಿದ್ದಾಳೆ ಎನ್ನಲಾಗ್ತಿದೆ. ಗುಡ್ಡದ ನೇರಲೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಶಿ ಕಿರಣ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಾಂತಾರ ಪ್ರೀಕ್ವೆಲ್ನಲ್ಲಿ ದೈವಾರಾಧನೆಯ ಪ್ರದರ್ಶನ ಆಗಬಾರದು : ರಿಷಬ್ ಶೆಟ್ಟಿಗೆ ಭಜರಂಗದಳ ಎಚ್ಚರಿಕೆ..!