Download Our App

Follow us

Home » ರಾಜ್ಯ » ರಾಜ್ಯಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ, ಸಡಗರ – ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ಬಂದ್..!

ರಾಜ್ಯಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ, ಸಡಗರ – ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ಬಂದ್..!

ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ವಿನಾಯಕನ ಮೂರ್ತಿ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆಗಳನ್ನು ನಡೆಯುತ್ತಿವೆ. ಕೆಲವೆಡೆ ಮಾರುಕಟ್ಟೆಯಿಂದ ಮನೆ, ಮಂಟಪಗಳಿಗೆ ಗಣಪತಿ ಬಂದು ಪ್ರತಿಷ್ಠಾಪನೆಯಾಗಿ ಅಲಂಕಾರ ಸೇರಿದಂತೆ ಮತ್ತಿತರ ಸಿದ್ಧತೆಗಳು ಭರದಿಂದ ಸಾಗಿದೆ. ಈಗಾಗಲೇ ಮನೆ ಮನೆಗಳಲ್ಲಿ ಏಕದಂತನ ಆರಾಧನೆ ಶುರುವಾಗಿದ್ದು, ಗಣೇಶನ ಮೂರ್ತಿ, ಹೂವು, ಹಣ್ಣು, ಪೂಜಾ ಸಾಮಾಗ್ರಿ, ಅಲಂಕಾರಿಕ ವಸ್ತುಗಳು ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಮಾರ್ಕೆಟ್​ಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದಾರೆ.

ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದೆಲ್ಲೆಡೆ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ನಮಿಸೋದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮನೆಯಂಗಳದಲ್ಲಿ ರಂಗೋಲಿ ಬಿಡಲು ಹೆಣ್ಣು ಮಕ್ಕಳು ರೆಡಿಯಾಗಿದ್ರೆ, ಪಂಚೆ ತೊಟ್ಟು ಪೂಜೆ ಮಾಡಿ ಲಡ್ಡು ಸವಿಯಲು, ಭರ್ಜರಿ ಸ್ಟೆಪ್ ಹಾಕೋಕೆ ಗಂಡೈಕ್ಳು ಕಾದು ಕುಳಿತ್ತಿದ್ದಾರೆ.

ಗಣೇಶ ಚತುರ್ಥಿ ಹಿಂದೂಗಳಿಗೆ ಅತ್ಯಂತ ಮಹತ್ವದ ಹಬ್ಬ. ಸಂಪ್ರದಾಯದ ಪ್ರಕಾರ ಯಾವುದೇ ಕಾರ್ಯಕ್ರಮ ಆರಂಭಿಸುವ ಮುನ್ನ ಗಣೇಶನಿಗೆ ಮೊದಲ ಪೂಜೆ ಮಾಡಲಾಗುತ್ತದೆ. ಗಣಪತಿಯನ್ನು ಅನಾದಿಕಾಲದಿಂದಲೂ ಸರ್ವ ಅನಿಷ್ಟಗಳನ್ನು ಹೋಗಲಾಡಿಸುವ ಹಾಗೂ ಸರ್ವ ಕುಲಗಳ ಮುಖ್ಯಸ್ಥನಾಗಿರುವ ದೇವರೆಂದು ಪೂಜಿಸಲಾಗುತ್ತದೆ. ಭಗವಾನ್ ಗಣೇಶನ ಜನ್ಮದಿನವಾದ ಭಾದ್ರಪದ ಶುದ್ಧ ಚೌತಿಯನ್ನು ವಿಶ್ವಾದ್ಯಂತ ಹಿಂದೂಗಳು ಗಣೇಶ ಚತುರ್ಥಿ ಎಂದು ಆಚರಿಸುತ್ತಾರೆ. ಹಲವೆಡೆ ವಿವಿಧ ರೀತಿಯಲ್ಲಿ ಕೆಲ ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ವಿನಾಯಕನನ್ನು ಪೂಜಿಸಿ ಕೊನೆ ದಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ. ಇದು ಅನಾದಿ ಕಾಲದ ಸಂಪ್ರದಾಯವಾಗಿದೆ.

ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ : ಕೆನ್ಸಿಂಗ್‌ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಕೆನ್ಸಿಂಗ್‌ಟನ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕೇವಲ ಎಂಇಜಿ ಕಡೆಯಿಂದ ಕನ್ನಿಂಗ್‌ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಯಸ್ವಾಮಿ ಮೊದಲಿಯಾರ್ ರಸ್ತೆ ಕಡೆಯಿಂದ ಆರ್.ಬಿ.ಐ ಜಂಕ್ಷನ್ ಮುಖಾಂತರ ಹಲಸೂರು ಲೇಕ್ ಕಡೆಗೆ ಅಣಸ್ವಾಮಿ ಮೊದಲಿಯಳ ರಸ್ತೆಯಲ್ಲಿ, ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಕಣ್ಮು ಹಲಸೂರು ಲೇಕ್ ಕಡೆಯಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್ ಕಡೆಗೆ ವಿಕಮುಖ ಸಂಚಾರಕ್ಕೆ, ಅನುವು ಮಾಡಿಕೊಡಲಾಗಿದೆ.

ವಾಹನ ನಿಲುಗಡೆ ನಿಷೇಧ : ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ಕೆನ್ಸಿಂಗ್‌ಟನ್ ರಸ್ತೆ-ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ-ಟ್ಯಾಂಕ್ ರಸ್ತೆಗಳಲ್ಲಿ ಪಾರ್ಕಿಂಗ್‌ಅನ್ನು ಸೆಪ್ಟೆಂಬರ್​ 7 ರಿಂದ 9 ವರೆಗೆ ಎಲ್ಲ ರೀತಿಯ ವಾಹನಗಳ ಪಾರ್ಕಿಂಗ್ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ : ನಾಡಿನೆಲ್ಲೆಡೆ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ : ಹೂ-ಹಣ್ಣು ದುಬಾರಿ, ಮಾರ್ಕೆಟ್​ಗಳಲ್ಲಿ ಜನವೋ ಜನ..!

 

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here