ನಾಡಿನಾದ್ಯಂತ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಮಾರ್ಕೆಟ್ಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಹೂವು-ಹಣ್ಣು, ಪೂಜಾ ಸಾಮಗ್ರಿ, ಗಣೇಶನ ಮೂರ್ತಿ, ತಳಿರು ತೋರಣಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮುಂಜಾನೆ 4 ಗಂಟೆಯಿಂದಲೇ ಕೆ.ಆರ್.ಮಾರ್ಕೆಟ್ನಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಬೆಲೆ ಏರಿಕೆಯ ಬಿಸಿ ನಡುವೆಯೂ ಹೂವು-ಹಣ್ಣುಗಳ ಖರೀದಿಗಾಗಿ ಜನರು ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದಾರೆ.
ಇನ್ನು ಒಂದೆಡೆ ಹಬ್ಬದ ಸಾಮಾಗ್ರಿಗಳ ಖರೀದಿಯಾದರೆ, ಮತ್ತೊಂದೆಡೆ ಮಾರ್ಕೆಟ್ಗೆ ಎಂಟ್ರಿಕೊಟ್ಟಿರುವ ಬಣ್ಣ ಬಣ್ಣದ ಗಣಪ, ಪರಿಸರ ಸ್ನೇಹಿ ಗಣಪ, ಮುದ್ದುಮುಖದ ಗೌರಿ ವಿಗ್ರಹಗಳಿಗೂ ಬೇಡಿಕೆ ಸೃಷ್ಟಿಯಾಗಿದೆ. ಗೌರಿ ಗಣೇಶನ ಮೂರ್ತಿಗಳನ್ನು ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಮುಂಬೈ, ಪುಣೆ ಸೇರಿದಂತೆ ಹಲವೆಡೆಯಿಂದ ಬಂದ ಗಣಪನ ಮೂರ್ತಿಗಳು ಮಾರಾಟವಾಗಿದ್ದಕ್ಕೆ ವ್ಯಾಪಾರಿಗಳು ಖುಷಿಯಾಗಿದ್ದಾರೆ.
ಯಾವುದರ ಬೆಲೆ ಎಷ್ಟು?
- ಸೇವಂತಿಗೆ ಹೂ: 100ರೂ. ಕೆಜಿ
- ಗುಲಾಬಿ: 80 ರೂ. ಕೆಜಿ
- ಮಲ್ಲಿಗೆ: 120 ರೂ. ಗ್ರಾಂ
- ಕಮಲದ ಹೂ ಒಂದಕ್ಕೆ 40 ರೂ.
- ಗರಿಕೆ-ಕಟ್ಟಿಗೆ 30 ರೂ.
- ಮಾವಿನ ತೋರಣ- 20 ರೂ.
- ಬಿಲ್ವಪತ್ರೆ- 20ರೂ.
- ಎಕ್ಕದಹಾರ- 50 ರಿಂದ 60 ರೂ.
- ಚೆಂಡೂ ಹೂ – 50 ರೂ.ಕೆಜಿ
- ತೋಮಾಲೆ – 1600 ರೂ.
- ಚಂಡು ಹೂವಿನ ಹಾರ – 1800 ರೂ.
- ಚೆಂಡು ಹೂವಿನ ದಿಂಡು – 100 ರೂ.
- ಸೇಬು: 220 ರೂ.
- ಮೂಸಂಬಿ: 100ರೂ.
- ದಾಳಿಂಬೆ – 300 ರೂ.
- ದ್ರಾಕ್ಷಿ- 180 ರೂ.
- ಕಿತ್ತಳೆ- 140 ರೂ.
- ಬಾಳೆ ಹಣ್ಣು- 110 ರೂ.
ಇದನ್ನೂ ಓದಿ : ಶೂಟಿಂಗ್ ವೇಳೆ ಲೈಟ್ ಮ್ಯಾನ್ ಸಾವು – ಡೈರೆಕ್ಟರ್ ಯೋಗರಾಜ್ ಭಟ್ ವಿರುದ್ದ FIR ದಾಖಲು..!