Download Our App

Follow us

Home » ಜಿಲ್ಲೆ » ಕೊಡಗಿನಲ್ಲಿ ನಿಲ್ಲದ ಗಜರಾಜನ ಆರ್ಭಟ – ಜನರಲ್ಲಿ ಹೆಚ್ಚಿದ ಆತಂಕ..!

ಕೊಡಗಿನಲ್ಲಿ ನಿಲ್ಲದ ಗಜರಾಜನ ಆರ್ಭಟ – ಜನರಲ್ಲಿ ಹೆಚ್ಚಿದ ಆತಂಕ..!

ಕೊಡಗು : ಕೊಡಗು ಜಿಲ್ಲೆಯಲ್ಲಿ ಪದೇ-ಪದೇ ಕಾಣಿಸಿಕೊಳ್ತಿರುವ ಆನೆಗಳು ಜನರಲ್ಲಿ ಆತಂಕ ಮೂಡಿಸಿವೆ. ರಾಷ್ಟ್ರೀಯ ಹೆದ್ದಾರಿಗಳು, ಗ್ರಾಮಗಳ ಸಮೀಪದಲ್ಲೇ ಆನೆಗಳ ಹಿಂಡು ಬರ್ತಿವೆ. ಒಂಟಿ ಆನೆಗಳು ರಸ್ತೆಯಲ್ಲಿ ಹಾಡ ಹಗಲೇ ಬರ್ತಿವೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಶುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಬಳಿ ರಸ್ತೆ ಬದಿಯಲ್ಲೆ ಬಂದು ತಾನೇ ಗೇಟ್ ತೆಗೆದು ಆನೆ ಓಡಿ ಹೋಗಿದೆ. ಕುಶಾಲನಗರ ತಾಲೂಕಿನ ವಾಲ್ನೂರು- ಸಿದ್ದಾಪುರ ರಸ್ತೆ ಮಾರ್ಗದಲ್ಲಿ ಕಾಡಾನೆ ಕಾಣಿಸಿಕೊಂಡು ಕಾಫಿ ತೋಟಕ್ಕೆ ಸಲಗ ನುಗ್ಗಿ ಹಾನಿ ಮಾಡಿದೆ. ಈ ಘಟನೆ ಸ್ಥಳಿಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಮತ್ತೊಂದೆಡೆ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಕುಮಟೂರು ಕೆರೆಯಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು ಆನಂತರ ಸುಬ್ರಮಣಿ ಎಂಬುವವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ. ನಾಲ್ಕೈದು ಆನೆಗಳು ಕೆರೆಯಲ್ಲೇ ಇದ್ದು ಅವುಗಳನ್ನು ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಕೇಸ್​ – ಆರೋಪಿ ಫಯಾಜ್ 6 ದಿನ ಸಿಐಡಿ ಕಸ್ಟಡಿಗೆ..!

Leave a Comment

DG Ad

RELATED LATEST NEWS

Top Headlines

ಪ್ಲೀಸ್‌ ಒಂದು ಚಾನ್ಸ್​ ಕೊಡಿ ಬಿಗ್​ಬಾಸ್… ಜಗದೀಶ್, ರಂಜಿತ್ ಹೊರಹೋಗ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು..!

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆಯುತ್ತಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ

Live Cricket

Add Your Heading Text Here