ಬೆಂಗಳೂರು : ಅಮಾಯಕರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ವೃದ್ಧರಿಗೆ ಹಣ ವರ್ಗಾವಣೆ ಮಾಡೋ ನೆಪದಲ್ಲಿ ಈ ಖತರ್ನಾಕ್ ಆರೋಪಿ ವಂಚಿಸ್ತಿದ್ದ. ಹಣ ವರ್ಗಾವಣೆಗೆ ಅಂತಾ ಎಟಿಎಂಗೆ ಬರೋರನ್ನೇ ಈತ ಟಾರ್ಗೆಟ್ ಮಾಡಿಕೊಂಡಿದ್ದ. ಫೇಕ್ ಆ್ಯಪ್ ಮೂಲಕ ಟ್ರಾಂಜಾಕ್ಷನ್ ಮೆಸೇಜ್ ತೋರಿಸಿ ಆರೋಪಿ ವಂಚಿಸ್ತಿದ್ದ. ಇದೀಗ ಮಾಗಡಿ ರಸ್ತೆ ಪೊಲೀಸರಿಂದ ಆರೋಪಿ ಅರೆಸ್ಟ್ ಆಗಿದ್ದಾನೆ.
ಕ್ಯಾಶ್ ಡೆಪಾಸಿಟ್ ಮಿಷನ್ ಇರೋ ಎಟಿಎಂ ಗಳ ಬಳಿ ಆರೋಪಿ ರೌಂಡ್ಸ್ ಹಾಕ್ತಿದ್ದ, ಈ ವೇಳೆ ಹಣ ಡೆಪಾಸಿಟ್ ಮಾಡೋಕೆ ಬರೋ ವೃದ್ದರು ಬಂದ್ರೆ ಮೈಂಡ್ ಡೈವರ್ಟ್ ಮಾಡಿ ವಂಚನೆ ಮಾಡುತ್ತಿದ್ದ. ನನಗೆ ಅರ್ಜೆಂಟ್ ಕ್ಯಾಶ್ ಬೇಕಾಗಿದೆ ನೆಫ್ಟ್ ಮೂಲಕ ನಿಮಗೆ ಹಣ ವರ್ಗಾವಣೆ ಮಾಡ್ತೀನಿ ಅಂತಾ ಬೇಡಿಕೊಳ್ತಿದ್ದ. ನಂಬಿ ಹಣ ಕೊಟ್ರೆ ಸಾಕು ಫೇಕ್ ಮೆಸೇಜ್ ಕಳಿಸಿ ವಂಚಿಸುತ್ತಿದ್ದ.
ವೃದ್ಧರ ಹೆಸರು, ಅಕೌಂಟ್ ನಂಬರ್ ತಿಳಿದುಕೊಂಡು ಹಣ ವರ್ಗಾವಣೆ ಆದಂತೆ ಮೆಸೇಜ್ ಕಳಿಸ್ತಿದ್ದ. ಈ ಆರೋಪಿ ಮಾಗಡಿ ರೋಡ್, ಸುಬ್ರಹ್ಮಣ್ಯ ನಗರ, ರಾಜಾಜಿನಗರ ಸೇರಿದಂತೆ ಹಲವೆಡೆ ಕೃತ್ಯವೆಸಗಿದ್ದು, ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಈ ಪ್ರಕರಣ ಮಾಗಡಿ ರಸ್ತೆ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಹೆಚ್ಚು ಲಾಭದ ಆಸೆ ತೋರಿಸಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ : ಆರೋಪಿಗಳು ಅರೆಸ್ಟ್…!